×
Ad

ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್: ಬೆಂಗಳೂರು ಉತ್ತರ-ದಕ್ಷಿಣ ತಂಡಗಳು ಪ್ರಥಮ

Update: 2018-11-04 22:47 IST

ಚಿಕ್ಕಮಗಳೂರು, ನ.4: ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್‌ನಲ್ಲಿ ಬಾಲಕರ ವಿಭಾಗದಲ್ಲಿ ಬೆಂಗಳೂರು ಉತ್ತರ ಮತ್ತು ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡಗಳು ಪ್ರಥಮ ಸ್ಥಾನ ಪಡೆದುಕೊಂಡವು.

ನಗರದಲ್ಲಿ 2 ದಿನಗಳ ಕಾಲ ಪಪೂ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಪಂದ್ಯಾವಳಿಯ ಅಂತಿಮ ಹಂತದಲ್ಲಿ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಬೆಂಗಳೂರು ದಕ್ಷಿಣ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ರನ್ನರ್‌ ಅಪ್ ಆಯಿತು.

ಬಾಲಕಿಯರ ವಿಭಾಗದ ಬೆಂಗಳೂರು ದಕ್ಷಿಣ ತಂಡದಲ್ಲಿ ತ್ರಿಶಾ ಹೆಗಡೆ, ಡಿ.ಶೀತಲ್, ದೃತಿ ಇತೀಶ್, ಅಂಚಲ್ ಧವನ್, ಅನನ್ಯ ಪ್ರಥಮ ಸ್ಥಾನ ತನ್ನದಾಗಿಸಿಕೊಂಡರೆ, ಬೆಂಗಳೂರು ಉತ್ತರ ತಂಡದಲ್ಲಿದ್ದ ಜನನಿ ಅನಂತ್‌ಕುಮಾರ್, ಶಿವಾನಿ ಶಾಂತಗಿರಿ, ಶ್ರೀಲಕ್ಷ್ಮೀ ಭಾರಧ್ವಾಜ್, ಸಿರಿಷಾ, ನಿಖಿತಾ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಬಾಲಕರ ವಿಭಾಗದ ಉತ್ತರ ತಂಡದಲ್ಲಿ ಟಿ.ಎಸ್.ಸಾಕೇತ್, ಎ.ಆರ್.ಅಭಿಮಾನ್, ಎಂ.ಸಿ.ಚಂದನ್, ಎಸ್.ಅಭಿಲಾಷ್, ಜಿ.ಸಾಗರ್ ಪ್ರಥಮ ಸ್ಥಾನ ಪಡೆದುಕೊಂಡರೆ, ಇದೇ ವಿಭಾಗದ ಬೆಂಗಳೂರು ದಕ್ಷಿಣ ತಂಡದ ಎಂ.ರೋಹಿತ್, ಸಂಕೇತ್ ದೈತೋಟ, ಸುಮಿತ್ ಸುಕುಮಾರ್ ಎಮ್ರಾಳ್, ಶ್ರೇಯಸ್ ನೇಯನಿ, ಟಿ.ಎ.ಚಂದನ್ ದ್ವಿತೀಯ ಸ್ಥಾನ ಪಡೆದುಕೊಂಡರು.

ಬಾಲಕರ ವಿಭಾಗದಲ್ಲಿ 32, ಬಾಲಕಿಯರ ವಿಭಾಗದಲ್ಲಿ 29 ತಂಡಗಳು ಭಾಗವಹಿಸಿದ್ದವು. ಬಾಲಕಿಯರ ಪಂದ್ಯಾವಳಿ ಚಿಕ್ಕಮಗಳೂರು ಕ್ಲಬ್ ಅಂಗಣದಲ್ಲಿ, ಬಾಲಕರ ಪಂದ್ಯಾವಳಿ ಶತಮಾನೋತ್ಸವ ಕ್ರೀಡಾಂಗಣದ ದೇವರಾಜ ಅರಸು ಒಳಾಂಗಣದಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News