ಓ ಮೆಣಸೇ...

Update: 2018-11-05 08:50 GMT

ಮೋದಿ ಭರವಸೆಯ ಗೆಳೆಯ -ಶಿಂಬೋ ಅಬೆ, ಜಪಾನ್ ಪ್ರಧಾನಿ
ದೇಶದ ಜನರನ್ನು ಹೊರತು ಪಡಿಸಿ, ವಿದೇಶಿಯರೆಲ್ಲ ಇದನ್ನೇ ಹೇಳುತ್ತಿದ್ದಾರೆ. ಮನೆಗೆ ಮಾರಿ, ಊರಿಗೆ ಉಪಕಾರಿ.

---------------------
  ಕಾಂಗ್ರೆಸ್ ಸೇರಿದ್ದರಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿಯಾದೆ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಜೆಡಿಎಸ್ ತೊರೆದದ್ದರಿಂದ ಎಂದು ನೇರವಾಗಿಯೇ ಹೇಳಬಹುದಲ್ಲ?
---------------------

ನಾನು ಮುಖ್ಯಮಂತ್ರಿಯಾಗಿದ್ದು, ಪ್ರಧಾನಿಯಾಗಿದ್ದು ದೈವದ ಲೀಲೆ -ದೇವೇಗೌಡ, ಮಾಜಿ ಪ್ರಧಾನಿ

ತಮ್ಮ ಮಗ ಮುಖ್ಯಮಂತ್ರಿಯಾಗಿದ್ದು ಸಣ್ಣ ಲೀಲೆಯೇನೂ ಅಲ್ಲ.

---------------------
ಕಾಂಗ್ರೆಸ್ ಈಗ ಮುಳುಗುವ ಹಡಗು -ಸಿ.ಟಿ.ರವಿ, ಶಾಸಕ
ಸದ್ಯಕ್ಕೆ ದೇಶವನ್ನೇ ಮುಳುಗಿಸುವ ಹಂತದಲ್ಲಿರುವ ಮೋದಿಯ ಬಗ್ಗೆ ಮಾತನಾಡಿ.

---------------------
ಒತ್ತಡಕ್ಕೆ ಮಣಿಯುವ ಜಾಯಮಾನದ ಹೆಣ್ಣು ಮಗಳು ನಾನಲ್ಲ -ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಿ
ಯಾವುದಕ್ಕೆ ಮಣಿಯುತ್ತೀರಿ ಎನ್ನುವುದನ್ನಾದರೂ ಹೇಳಿ ಬಿಡಿ.

---------------------
ನೋಟು ರದ್ದು ಮಾಡಿದ ದೇಶಗಳೆಲ್ಲವೂ ದಿವಾಳಿಯಾಗಿವೆ -ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
ಆ ದೇಶಗಳ ಸಾಲಲ್ಲಿ ಭಾರತವನ್ನು ಸೇರಿಸಿದ ಹೆಮ್ಮೆ ಮೋದಿಯವರದು.

---------------------
  2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಮುಸ್ಲಿಂ ಮಹಿಳೆಯರ ಫೆವರಿಟ್ ಅಭ್ಯರ್ಥಿ -ಶಹನವಾಝ್ ಹುಸೈನ್, ಬಿಜೆಪಿ ನಾಯಕ
ತಲಾಖ್ ಹೇಳದೆಯೇ ಹೆಂಡತಿಯನ್ನು ಬಿಟ್ಟವನು ಎನ್ನುವ ಕಾರಣಕ್ಕೆ ಇರಬಹುದೇ?

---------------------
ನಾನು ಅಷ್ಟು ಸುಲಭವಾಗಿ ಸಾಯುವುದಿಲ್ಲ -ಎಚ್.ಡಿ. ಕುಮಾರ ಸ್ವಾಮಿ, ಮುಖ್ಯಮಂತ್ರಿ
ಅಧಿಕಾರ ಸಾಯುವ ಆಸೆಯನ್ನು ದೂರ ಮಾಡುತ್ತದೆ.

---------------------
ತಂತ್ರ - ಕುತಂತ್ರದಲ್ಲಿ ಡಿ.ಕೆ.ಶಿವಕುಮಾರ್ ಪಿಎಚ್‌ಡಿ ಪಡೆದಿದ್ದಾರೆ - ಜನಾರ್ದನ ರೆಡ್ಡಿ, ಗಣಿ ಉದ್ಯಮಿ
ತಾವೇ ಸ್ಥಾಪಿಸಿರುವ ವಿಶ್ವವಿದ್ಯಾನಿಲಯದಲ್ಲಿ ಅದನ್ನು ಪಡೆದಿರುವುದಂತೆ.

---------------------

ರಾಮ ಮಂದಿರ ವಿಚಾರದಲ್ಲಿ ಹಿಂದೂಗಳು ಸಹನೆ ಕಳೆದು ಕೊಳ್ಳುತ್ತಿದ್ದಾರೆ - ಗಿರಿರಾಜ್ ಸಿಂಗ್, ಕೇಂದ್ರ ಸಚಿವ
ದೇಶದ ಅಭಿವೃದ್ಧಿಯ ವಿಷಯದಲ್ಲಿ ಕಾಣಿಸಿಕೊಂಡಿರುವ ಅಸಹನೆ ಅದು.

---------------------

ಕಣ್ಣೀರಿಡುವ ನಾಯಕರನ್ನು ನಂಬಬೇಡಿ -ಸಿ.ಪಿ.ಯೋಗೇಶ್ವರ್, ಮಾಜಿ ಸಚಿವ
 ಕಣ್ಣೀರಿಡುವ ಕಾರ್ಯಕರ್ತರ ಬಗ್ಗೆ ಏನು ಹೇಳುತ್ತೀರಿ?

---------------------
  ಕೇಂದ್ರ ಸರಕಾರವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಹೊರಡಿಸಲಿ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ವಾಲಿಯನ್ನು ರಾಮ ಮರೆಯಲ್ಲಿ ಕೊಂದಂತೆಯೇ ಸುಪ್ರೀಂಕೋರ್ಟ್‌ಗೆ ಬಾಣ ಬಿಟ್ಟಿದ್ದಾರೆ.

---------------------
  ನಾವು ಇತಿಹಾಸದಿಂದ ಪಾಠ ಕಲಿಯಬೇಕು -ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಪಾಠ ಕಲಿತಿದ್ದರೆ, ನೀವು ಮುಖ್ಯಮಂತ್ರಿಯಾಗುತ್ತಿರಲಿಲ್ಲ.

---------------------
  ಬೇರೆ ಕುಟುಂಬಗಳ ಖಾಸಗಿ ವಿಷಯಗಳಲ್ಲಿ ಮೂಗು ತೂರಿಸುವ ಸಿ.ಎಂ.ಕುಮಾರಸ್ವಾಮಿ ಸದ್ಯದಲ್ಲೇ ಮೀಟೂ ಅಭಿಯಾನದಲ್ಲಿ ಸಿಲುಕಲಿದ್ದಾರೆ -ಕುಮಾರ ಬಂಗಾರಪ್ಪ, ಶಾಸಕ
  ಒಂದಾನೊಂದು ಕಾಲದಲ್ಲಿ ತಾವು ನಟರಾಗಿದ್ದೀರಿ ಎನ್ನುವುದನ್ನು ಮರೆಯಬೇಡಿ. ನಟಿಯರು ಬಾಯಿ ತೆರೆದರೆ ಕಷ್ಟ.

---------------------
  ರಾಜ್ಯದ ಮೈತ್ರಿ ಸರಕಾರ ಜನರಿಗೆ ಸ್ವರ್ಗದ ಚಿತ್ರ ತೋರಿಸಿ, ಅವರನ್ನು ಸೆಳೆದು ನರಕಕ್ಕೆ ತಳ್ಳುತ್ತಿದೆ -ನಳಿನ್‌ಕುಮಾರ್ ಕಟೀಲು, ಸಂಸದ
ಮೋದಿಯಂತೆ ನರಕದ ಚಿತ್ರ ತೋರಿಸಿಯೇ ನರಕಕ್ಕೆ ತಳ್ಳಬೇಕು ಅನ್ನುತ್ತೀರಾ?

---------------------
  ಇಂದಿನ ಸಾಲ ಬಿಕ್ಕಟ್ಟಿಗೆ ರಿಸರ್ವ್ ಬ್ಯಾಂಕೇ ಕಾರಣ -ಅರುಣ್ ಜೇಟ್ಲಿ, ಕೇಂದ್ರ ಸಚಿವ
  ರಿಸರ್ವ್ ಬ್ಯಾಂಕಿನ ಇಂದಿನ ಸ್ಥಿತಿಗೆ ಯಾರು ಕಾರಣ?
---------------------
  ಬುದ್ಧಿಜೀವಿಗಳು ಮುಂದೆ ಹಿಟ್ಲರ್ ಜಯಂತಿ ಆಚರಿಸಿದರೂ ಆಶ್ಚರ್ಯವಿಲ್ಲ -ಡಾ.ಚಿದಾನಂದ ಮೂರ್ತಿ, ಸಂಶೋಧಕ
ಹಿಟ್ಲರ್ ಜಯಂತಿಯನ್ನು ನಮಗೆ ಬಿಡಿ ಎಂದರಂತೆ ಮೋದಿ ಭಕ್ತರು.

---------------------
  ಮಹಿಳಾವಾದಿಗಳು ಶಬರಿಮಲೆ ಪ್ರವೇಶಿಸಿದರೆ ಅಲ್ಲೂ ಕೂಡಾ ಮೀಟೂ ಆರೋಪ ಕೇಳಿಬರುವ ಸಾಧ್ಯತೆಗಳಿವೆ -ರಾಹುಲ್ ಈಶ್ವರ್, ಅಯ್ಯಪ್ಪ ಧರ್ಮ ಸೇನಾ ಅಧ್ಯಕ್ಷ
ಅಂದರೆ ತಮಗೆ ಅಯ್ಯಪ್ಪನಿಗಿಂತ ಜಾಸ್ತಿ ಮೀಟೂ ಭಯವಿದೆಯೆಂದಾಯಿತು.

---------------------
  ಸರ್ದಾರ್ ಪಾಟೇಲ್ ಇಲ್ಲದಿದ್ದದ್ದರೆ ಕೇರಳಕ್ಕೆ ಹೋಗಬೇಕಿದ್ದರೂ ವೀಸಾ ಬೇಕಿತ್ತು -ಸಿ.ಟಿ.ರವಿ, ಶಾಸಕ
ಪಟೇಲ್ ಇದ್ದಿದ್ದರೆ ಆರೆಸ್ಸೆಸ್‌ಗೆ ಮತ್ತೊಮ್ಮೆ ನಿಷೇಧ ಬೀಳುತ್ತಿತ್ತು.

---------------------
  ಏಕತಾ ಪ್ರತಿಮೆ ನಿರ್ಮಿಸಿದ ಮಾದರಿಯಲ್ಲೇ ರಾಮ ಮಂದಿರ ನಿರ್ಮಿಸಬೇಕು -ಮನಮೋಹನ ವೈದ್ಯ, ಆರೆಸ್ಸೆಸ್ ಮುಖಂಡ
ಅಂದರೆ ಏಕತೆಯ ಹೆಸರಲ್ಲಿ ವಿಭಜನೆಯೇ?
---------------------
  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಭರವಸೆ ಹುಸಿಯಾದರೆ ಲೋಕಸಭೆಯಲ್ಲಿ ಬಿಜೆಪಿ 280 ಸ್ಥಾನದಿಂದ ಎರಡು ಸ್ಥಾನಕ್ಕೆ ಕುಸಿಯಲಿದೆ -ಉದ್ಭವ್‌ಠಾಕ್ರೆ, ಶಿವಸೇನಾ ಅಧ್ಯಕ್ಷ
ಅಂದರೆ ಬಿಜೆಪಿ ಸ್ಥಾನ ಏರಿಸುವುದಕ್ಕಾಗಿ ರಾಮಮಂದಿರ ಎಂದಾಯಿತು.
 ---------------------

ಕಾಂಗ್ರೆಸ್ ಭ್ರಷ್ಟಾಚಾರ ತುಂಬಿದ ದೊಡ್ಡ ಚರಂಡಿ -ಶ್ರೀಕಾಂತ್ ಶರ್ಮಾ, ಉ.ಪ್ರ.ಸಚಿವ
ಆ ಚರಂಡಿಯಿಂದಲೇ ಬಿಜೆಪಿ ಮೊಳಕೆ ಒಡೆದದ್ದು.

---------------------
  ದೇಶ ಉಳಿಸಲು ಕಾಂಗ್ರೆಸ್ ಜೊತೆ ಎಲ್ಲಾ ಪಕ್ಷಗಳು ಕೈ ಜೋಡಿಸುವುದು ಇಂದಿನ ಅಗತ್ಯ -ಚಂದ್ರಬಾಬು ನಾಯ್ಡು, ಟಿಡಿಪಿ ಅಧ್ಯಕ್ಷ
ಕಾಂಗ್ರೆಸ್ ಉಳಿಸಲು ಕೂಡ ಇದು ಅಗತ್ಯ.

---------------------
  ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು -ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಅಂದರೆ ಆ ಒಂದು ದಿನವೂ ಆಚರಿಸಬಾರದು ಎಂದೇ?
---------------------
  ಪ್ರಧಾನಿ ಮೋದಿ ಅವರ ಹೆಂಡತಿಗೆ ಜೀವನಾಂಶ ಕೊಡುತ್ತಿದ್ದಾರೆಯೇ - ಸಿ.ಎಂ.ಇಬ್ರಾಹೀಂ, ವಿ.ಪ.ಸದಸ್ಯ
 ತಲಾಖ್ ಕೊಟ್ಟರೆ ಮಾತ್ರ ಜೀವನಾಂಶ ಕೊಡಬೇಕು.

---------------------
  ಹಿಂದೂ ಧರ್ಮದಲ್ಲಿ ಮಾತ್ರ ಮಹಿಳೆಗೆ ದೇವರ ಸ್ಥಾನ -ಎಸ್.ಎಲ್.ಬೈರಪ್ಪ, ಹಿರಿಯ ಸಾಹಿತಿ
  ಮತ್ತೆ ಶಬರಿಮಲೆಯಲ್ಲಿ ಮಹಿಳೆಗೆ ಯಾಕೆ ಆಕ್ಷೇಪ?
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!