×
Ad

ಜಗಳೂರು: ಕೊಳೆತ ಸ್ಥಿತಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ

Update: 2018-11-05 19:45 IST

ಜಗಳೂರು,ನ.5: ಕುತ್ತಿಗೆ ತುಂಡಾಗಿರುವ, ಕೊಳೆತ ಸ್ಥಿತಿಯಲ್ಲಿದ್ದ ನವಜಾತ ಶಿಶುವಿನ ಶವವು ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. 

ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಕೆರೆಯ ಬಳಿ ಶನಿವಾರ ಬೆಳಗ್ಗೆ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಯಾರೋ ಅಪರಿಚಿತರು ನವಜಾತ ಗಂಡು ಶಿಶುವಿನ ಮೃತದೇಹವನ್ನು ಚೀಲವೊಂದರಲ್ಲಿ ಹಾಕಿ, ಗ್ರಾಮದ ಕೆರೆಯ ಬಳಿ ಬಿಸಾಡಿ ಹೋಗಿದ್ದರು. 

ಕೂಸು ಕೊಳೆತು ಹೋಗಿ ಕುತ್ತಿಗೆ ತುಂಡಾಗಿದ್ದು, ಬಲಗೈ ಮತ್ತು ಮೈ ಮೇಲಿನ ಚರ್ಮವೂ ಕೊಳೆತಿದೆ. ಈ ಬಗ್ಗೆ ಜಗಳೂರು ದಾದಾಫೀರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News