ಮಡಿಕೇರಿ: ಭಗವತಿ ದೇವಾಲಯದಲ್ಲಿ ಕಳ್ಳತನ
Update: 2018-11-05 23:28 IST
ಮಡಿಕೇರಿ, ಅ.5 : ದೇವಾಲಯದ ಭಂಡಾರ ಡಬ್ಬಿಯ ಬೀಗ ಮುರಿದು ನಗದು ದೋಚಿ ಪರಾರಿಯಾಗಿರುವ ಘಟನೆ ಭಾಗಮಂಡಲದಲ್ಲಿ ನಡೆದಿದೆ.
ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಭಗವತಿ ದೇವಾಲಯದ ಭಂಡಾರ ಡಬ್ಬಿಯ ಬೀಗ ಮುರಿದು ಅಂದಾಜು 15 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ಆರ್‍ಎಕ್ಸ್ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.