ಬಳ್ಳಾರಿಯಲ್ಲಿ ಕಾಂಗ್ರೆಸ್ ನ ವಿಎಸ್ ಉಗ್ರಪ್ಪ ಗೆಲುವಿನತ್ತ ದಾಪುಗಾಲು
ಬೆಂಗಳೂರು, ನ.6 ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಶನಿವಾರ ನಡೆದ ಉಪಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8:00 ಗಂಟೆಗೆ ಆರಂಭಗೊಂಡಿದೆ.ಮೊದಲು ಅಂಚೆ ಮತಗಳ ಎಣಿಕೆ ನಡೆಯುತ್ತಿದೆ.
ಮಂಡ್ಯ, ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ, ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ನಡೆಯತ್ತಿದೆ.
ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಎಲ್ಲ ಕ್ಷೇತ್ರಗಳಲ್ಲೂ ನೇರ ಹಣಾಹಣಿ ಏರ್ಪಟ್ಟಿದೆ.
ಅಂಚೆ ಮತ ಎಣಿಕೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ವಿ.ಎಸ್ ಉಗ್ರಪ್ಪ, ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ ರಾಘವೇಂದ್ರ ಮತ್ತು ರಾಮನಗರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಅನಿತಾ ಕುಮಾರ ಸ್ವಾಮಿ, ಜಮಖಂಡಿಯಲ್ಲಿ ಕಾಂಗ್ರೆಸ್ ನ ಆನಂದ ನ್ಯಾಮಗೌಡ ಮುನ್ನಡೆ ಸಾಧಿಸಿದ್ದಾರೆ.
ಮಂಡ್ಯದಲ್ಲಿ ಮತ ಎಣಿಕೆ ತಾಂತ್ರಿಕ ದೋಷದಿಂದಾಗಿ ತಡವಾಗಿ ಮತ ಎಣಿಕೆ ಆರಂಭಗೊಂಡಿದೆ. ಮೊದಲ ಸುತ್ತಿನಲ್ಲಿ -ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಮುನ್ನಡೆ ಸಾಧಿಸಿದ್ದಾರೆ.
* ರಾಮನಗರದಲ್ಲಿ ಜೆಡಿಎಸ್ ನ ಅನಿತಾ ಕುಮಾರ ಸ್ವಾಮಿ 2ನೇ ಸುತ್ತಿನಲ್ಲಿ 10,882 ಮತಗಳ ಮುನ್ನಡೆ
*ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ ರಾಘವೇಂದ್ರ ಮುನ್ನಡೆ ಸಾಧಿಸಿದ್ದಾರೆ
*ಜಮಖಂಡಿಯಲ್ಲಿ ಕಾಂಗ್ರೆಸ್ ನ ಆನಂದ ನ್ಯಾಮೆಗೌಡ ಮುನ್ನಡೆ
,,,,,,,
*ರಾಮನಗರದಲ್ಲಿ 4ನೇ ಸುತ್ತು : ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರ ಸ್ವಾಮಿ 20,000 ಮತಗಳ ಮುನ್ನಡೆ
*ಶಿವಮೊಗ್ಗದಲ್ಲಿ ಜೆಡಿಎಸ್ ಮಧು ಬಂಗಾರಪ್ಪ ಅಲ್ಲ ಮುನ್ನಡೆ
* ಮಂಡ್ಯದಲ್ಲಿ ಜೆಡಿಎಸ್ ನ ಎಲ್ ಆರ್ ಶಿವರಾಮೇಗೌಡ 26159 ಮತಗಳ ಮುನ್ನಡೆ
*ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ 17480 ಮತಗಳ ಮುನ್ನಡೆ
*ಜಮಖಂಡಿಯಲ್ಲಿ ಕಾಂಗ್ರೆಸ್ ನ ಆನಂದ ನ್ಯಾಮೆ ಗೌಡ 5543 ಮತಗಳ ಮುನ್ನಡೆ
*ಬಳ್ಳಾರಿಯಲ್ಲಿ 2ನೇ ಸುತ್ತು ಕಾಂಗ್ರೆಸ್ ನ ವಿಎಸ್ ಉಗ್ರಪ್ಪ 31, 138 ಮತಗಳ ಮುನ್ನಡೆ
,,,,,,,,
ಶಿವಮೊಗ್ಗ : ಶಿವಮೊಗ್ಗದಲ್ಲಿ 3ನೇ ಸುತ್ತಿನಲ್ಲಿ ಬಿಜೆಪಿಯ ಬಿ ವೈ ರಾಘವೇಂದ್ರ 3,765 ಮತಗಳ ಮುನ್ನಡೆ
ಬಳ್ಳಾರಿ : ಬಳ್ಳಾರಿಯಲ್ಲಿ 4ನೇ ಸುತ್ತು ಕಾಂಗ್ರೆಸ್ ನ ವಿಎಸ್ ಉಗ್ರಪ್ಪ 31, 138 ಮುನ್ನಡೆ
ಮಂಡ್ಯ : ಜೆಡಿಎಸ್ ನ ಎಲ್ ಆರ್ ಶಿವರಾಮೆ ಗೌಡ 53,271 ಮುನ್ನಡೆ
ಜಮಖಂಡಿ : 5ನೇ ಸುತ್ತು ಕಾಂಗ್ರೆಸ್ ನ ಆನಂದ್ ನ್ಯಾಮ ಗೌಡ 9,300 ಮತಗಳ ಮುನ್ನಡೆ
ರಾಮನಗರ : 6ನೇ ಸುತ್ತು ಜೆಡಿಎಸ್ ನ ಅನಿತಾ ಕುಮಾರಸ್ವಾಮಿ 27,998 ಮತಗಳ ಮುನ್ನಡೆ ಸಾಧಿಸಿ ಗೆಲುವಿನ ಕಡೆಗೆ ಹೆಜ್ಜೆ ಇರಿಸಿದ್ದಾರೆ.