ಶಿವಮೊಗ್ಗದಲ್ಲಿ ಗೆಲುವಿನ ನಗೆ ಬೀರಿದ ರಾಘವೇಂದ್ರ
Update: 2018-11-06 12:20 IST
ಶಿವಮೊಗ್ಗ, ನ.6: ಶಿವಮೊಗ್ಗ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಜಯ ಗಳಿಸಿದ್ದಾರೆ. ಆರಂಭದಿಂದಲೂ ರಾಘವೇಂದ್ರ ಮತ್ತು ಮಧು ಬಂಗಾರಪ್ಪ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿತ್ತಾದರೂ ಅಂತಿಮ ಸುತ್ತುಗಳಲ್ಲಿ ರಾಘವೇಂದ್ರ ಮೇಲುಗೈ ಸಾಧಿಸಿದ್ದು, 52,168 ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದರು.