×
Ad

ಜನತೆ ನನ್ನನ್ನು ತಿರಸ್ಕರಿಸಿದ್ದಾರೆ: ಶಾಸಕ ಶ್ರೀರಾಮುಲು

Update: 2018-11-06 18:29 IST

ಬಳ್ಳಾರಿ/ಬೆಂಗಳೂರು, ನ.6: ನಾನೇ ಸೋಲಿನ ಹೊಣೆ ಹೊರುತ್ತೇನೆ. ಜೊತೆಗೆ, ಸೋಲು ಅನಾಥವಾಗಿದೆ ಎಂದು ಶಾಸಕ ಶ್ರೀರಾಮುಲು ಹೇಳಿದರು.

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತರೆ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದವರ ಪ್ರಾಬಲ್ಯವಿತ್ತು, ಹೀಗಾಗಿ, ಉಗ್ರಪ್ಪ ಗೆಲುವು ಸಾಧಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಬಳ್ಳಾರಿ ಕ್ಷೇತ್ರದ ಸೋಲು ನಮಗಾದ ಹಿನ್ನಡೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ನಮ್ಮ ಕಾರ್ಯಕರ್ತರು ಹರಸಾಹಸಪಟ್ಟಿದ್ದರು. ಆದರೆ ಭಗವಂತ ಫಲ ಕೊಟ್ಟಿಲ್ಲ. ಜನಾದೇಶಕ್ಕೆ ನಾವು ತಲೆಬಾಗುತ್ತೇವೆ. ಜನರು ನನ್ನನ್ನು ತಿರಸ್ಕರಿಸಿದ್ದಾರೆ. ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News