ಹನೂರು: ಜಲಾಶಯದಲ್ಲಿ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ
Update: 2018-11-07 16:41 IST
ಹನೂರು,ನ.7: ಸಮೀಪದ ಗುಂಡಾಲ್ ಜಲಾಶಯದಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಹನೂರು ಸಮೀಪದ ಮೋಡಹಳ್ಳಿ ಗ್ರಾಮದ ಬಸವರಾಜು (42) ಮೃತ ವ್ಯಕ್ತಿ. ಇವರು ಮಂಗಳವಾರ ಗುಂಡಾಲ್ ಜಲಾಶಯದಲ್ಲಿ ಮುಳುಗಿ ಮೃತಪಟ್ಟಿದ್ದಾರೆನ್ನಲಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಹನೂರು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮೃತದೇಹವನ್ನು ಹನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು. ಮೃತನ ಪತ್ನಿ ಮಾದೇವಿ ಕೊಲೆ ಶಂಕೆಯ ಬಗ್ಗೆ ದೂರು ನೀಡಿದ್ದು, ಹನೂರು ಪೋಲಿಸರು ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.