ಹನೂರು: ಅಕ್ರಮ ಮದ್ಯ ಸಾಗಾಟ; ಆರೋಪಿ ಬಂಧನ
Update: 2018-11-07 16:47 IST
ಹನೂರು,ನ.7: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿ, ಮದ್ಯವನ್ನು ವಶಪಡಿಸಿದ ಘಟನೆ ಇಲ್ಲಿನ ಸಮೀಪದ ಹುಲುಸುಗುಡ್ಡೆಯ ಬಳಿ ನಡೆದಿದೆ.
ಸಮೀಪದ ಕಣ್ಣೂರು ಗ್ರಾಮದ ವೃಷಭೇಂದ್ರ (27) ಬಂಧಿತ ಆರೋಪಿ. ಈತ ಹನೂರಿನ ಬಾರೊಂದರಲ್ಲಿ ಮದ್ಯವನ್ನು ಖರೀದಿಸಿ ಮಾರಾಟ ಮಾಡಲು ಗ್ರಾಮಕ್ಕೆ ಆಗಮಿಸುತ್ತಿದ್ದನು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇನ್‍ಸ್ ಪೆಕ್ಟರ್ ಮೋಹಿತ್ ಸಹದೇವ್ ಹಾಗೂ ಸಿಬ್ಬಂದಿಗಳು ಹುಲುಸುಗುಡ್ಡೆಯ ಬಳಿ ದಾಳಿ ಆರೋಪಿಯನ್ನು ತಡೆದು ಪರಿಶೀಲಿಸಿದಾಗ ಮದ್ಯ ಇರುವುದು ದೃಢಪಟ್ಟಿದೆ. ಬಳಿಕ 90 ಮಿ.ಲೀನ 96 ಮದ್ಯದ ಪೌಚ್‍ಗಳನ್ನು ವಶಪಡಿಸಿಕೊಂಡ ಪೋಲಿಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ದಾಳಿಯಲ್ಲಿ ಮುಖ್ಯಪೇದೆಗಳಾದ ಸಿದ್ಧೇಶ್, ರಾಮದಾಸ್, ಪ್ರದೀಪ್ ಹಾಗೂ ಚಂದ್ರುಶೇಖರ್ ಭಾಗವಹಸಿದ್ದರು.