ತುಮಕೂರು: ವಾಹನ ಕಳ್ಳನ ಬಂಧನ; 5 ದ್ವಿಚಕ್ರ ವಾಹನ ವಶ

Update: 2018-11-08 11:35 GMT

ತುಮಕೂರು,ನ.08: ಜಿಲ್ಲೆಯ ನಾಲ್ಕು ಹಾಗೂ ದೊಡ್ಡಬಳ್ಳಾಪುರದಲ್ಲಿ ನಡೆದ 1 ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಓರ್ವ ಕಳ್ಳನನ್ನು ಬಂಧಿಸಿರುವ ಗುಬ್ಬಿ ಪೊಲೀಸರು, ಆತನಿಂದ 2.10 ಲಕ್ಷ ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ನ.2 ರಂದು ಗುಬ್ಬಿ ತಾಲೂಕು ಚೇಳೂರು ಹೋಬಳಿ ಮಾದಾಪುರದ ತೋಟದ ಮನೆಯಲ್ಲಿರುವ ಶಿವಪ್ರಸಾದ್ ಎಂಬವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಹೊಂಡ ಶೈನ್ ದ್ವಿಚಕ್ರ ವಾಹನವನ್ನು ಯಾರೋ ಕಳವು ಮಾಡಿರುವ ಬಗ್ಗೆ ಗುಬ್ಬಿ ಠಾಣೆಗೆ ದೂರು ದಾಖಲಿಸಿದ್ದರು.

ಸದರಿ ಕೇಸಿನ ವಿಚಾರಣೆ ಆರಂಭಿಸಿದ ಗ್ರಾಮಾಂತರ ಡಿವೈಎಸ್ಪಿ ವೆಂಕಟಸ್ವಾಮಿ ನೇತೃತ್ವದ ತಂಡ ಗುಬ್ಬಿ ತಾಲೂಕು ಚೇಳೂರು ಹೋಬಳಿ ಗೌರಿಪುರದ ಮಂಜುನಾಥ್ (35) ಎಂಬ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಈತ ಜಿಲ್ಲೆಯ ಇನ್ನಿತರ ಕಡೆಗಳಲ್ಲಿ ನಡೆಸಿದ್ದ ಐದು ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.

ಆರೋಪಿಯಿಂದ ಗುಬ್ಬಿ ತಾಲೂಕು ಚೇಳೂರು ಹೋಬಳಿ ಅಂತಾಪುರದಲ್ಲಿ ಕಳವು ಮಾಡಿದ್ದ ಟಿ.ವಿ.ಎಸ್.ಎಕ್ಸೆಲ್ ಹೆವಿಡ್ಯೂಟಿ ವಾಹನ, ತುಮಕೂರು ತಾಲೂಕು ವಡ್ಡರಹಳ್ಳಿಯಲ್ಲಿ ಕಳವು ಮಾಡಿದ್ದ ಟಿವಿಎಸ್ ಜ್ಯೂಪಿಟರ್, ಗೂಳೂರಿನಲ್ಲಿ ಕಳವು ಮಾಡಿದ್ದ ಹೊಂಡಾ ಅಕ್ಟಿವಾ ಮತ್ತು ದೊಡ್ಡ ಬಳ್ಳಾಪರ ತಾಲೂಕಿನ ಕೋಡಿಹಳ್ಳಿಯಲ್ಲಿ ಕಳವು ಮಾಡಿದ್ದ ಟಿವಿಎಸ್ ಎಕ್ಸೆಲ್ 100 ವಾಹನವನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೊತ್ತ 2.10 ಲಕ್ಷ ರೂ. ಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News