×
Ad

ಟಿಪ್ಪು ಜಯಂತಿ: ಶಾಂತಿ ಕಾಪಾಡಲು ಎಸ್ಸೆಸ್ಸೆಫ್ ಮನವಿ

Update: 2018-11-08 17:31 IST

ಮಡಿಕೇರಿ, ನ.8: ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಅಶಾಂತಿ ಸೃಷ್ಟಿಸುವ ದುರುದ್ದೇಶದೊಂದಿಗೆ ಉದ್ರೇಕಕಾರಿ ಭಾಷಣ ಮಾಡಿ ರಾಜಕೀಯ ಬೇಳೆ ಬೇಯಿಸಲು ಯತ್ನಿಸುವವರ ಕುತಂತ್ರಕ್ಕೆ ಯಾರೂ ಬಲಿಯಾಗದೆ ಜಿಲ್ಲೆಯ ಶಾಂತಿಗಾಗಿ ಪ್ರಯತ್ನಸಬೇಕೆಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಕರೆ ನೀಡಿದ್ದಾರೆ.

ರಾಜಕೀಯ ಸ್ವಾರ್ಥಕ್ಕಾಗಿ ಭಾಷಣಕಾರೊಬ್ಬರು ಪ್ರವಾದಿಯರ ಬೋಧನೆಗಳನ್ನು ಕ್ರೌರ್ಯ ಎಂದು ಹೀಯಾಳಿಸಿರುವ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ವರದಿಯಾಗಿದೆ. ಇಂತಹವರ ವಿರುದ್ಧ ಸಂಬಂಧಪಟ್ಟ ಇಲಾಖೆಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗಿ ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News