ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಮಾಡೆಲ್: ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ

Update: 2018-11-08 17:08 GMT

ಮಂಡ್ಯ, ನ.8: ಆಧುನಿಕ ಪ್ರಬುದ್ಧ ಭಾರತ ನಿರ್ಮಾಣದ ಕನಸು ಕಟ್ಟಿದ್ದ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಜ್ಞಾನಸಂಪತ್ತು ವಿಶ್ವಕ್ಕೆ ಭೂಷಣವಾಗಿದೆ. ಇಂತಹವರನ್ನು ವಿದ್ಯಾರ್ಥಿಗಳು ಮಾಡೆಲ್ ಆಗಿ ಸ್ವೀಕರಿಸಿದರೆ ಉನ್ನತ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ ಸಲಹೆ ಹೇಳಿದ್ದಾರೆ.

ನವೆಂಬರ್ 7ರ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಾಲೆಗೆ ಪ್ರವೇಶ ಪಡೆದ ದಿನದ ಅಂಗವಾಗಿ ಹಾಗೂ ನರಕಚತುದರ್ಶಿ ಮತ್ತು ಬಲಿಪಾಡ್ಯಮಿ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿಯ ಉದ್ಯಾನವದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಬಳಿ ಬಹುಜನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವು ಏರ್ಪಡಿಸಿದ್ದ ವಿಶ್ವ ವಿದ್ಯಾರ್ಥಿಗಳ ದಿನಾಚರಣೆ ಹಾಗೂ ಅಸುರ-ದಾನವ ಚಕ್ರವರ್ತಿಗಳ ಸಂಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಡತನ ಮತ್ತು ಜಾತಿಯತೆಯ ಕ್ರೌರ್ಯದ ಸಂಕಷ್ಟದ ಅಂದಿನ ದಿನಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು 18 ಗಂಟೆಗಳ ಕಾಲ ಓದಿ, ಭಾರತದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಏಷ್ಯಾಖಂಡದಲ್ಲೇ ಪ್ರಥಮಬಾರಿಗೆ ಅರ್ಥಶಾಸ್ತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದರೆ ಅವರ ಶ್ರಮ, ಓದಿನ ಹಂಬಲ ಎಷ್ಟು ಇತ್ತು ಎಂಬುದನ್ನು ಅರಿಯಬೇಕಿದೆ ಎಂದು ಅವರು ಹೇಳಿದರು.

ಸಂಪಮ್ಮೂಲ ವ್ಯಕ್ತಿ ಅಶೋಕ ಮೌರ್ಯ ಮಾತನಾಡಿ, ಭಾರತ ದೇಶಲ್ಲಿ ಮೂಲನಿವಾಸಿ ದ್ರಾವಿಡ ಸಂಸ್ಕೃತಿಯ ರಾಜರಾದ ಅಸುರ-ದಾನವ ಚಕ್ರಮರ್ತಿಗಳಿಗೂ ಮತ್ತು ವಿದೇಶಿ ಆರ್ಯರಿಗೂ ನಡೆದ ಯುದ್ದವೇ ಪುರಾಣ ಕಥೆಗಳಾಗಿವೆ ಎಂಬುದನ್ನು ಡಾ.ಅಂಬೇಡ್ಕರ್ ತಿಳಿಸಿದ್ದಾರೆ ಎಂಬುದನ್ನು ಎಂದಿಗೂ ಮರಿಬಾರದು ಎಂದರು.

ಆರ್ಯರ ಮೋಸಕ್ಕೆ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ಮೂಲನಿವಾಸಿ ದೊರೆಗಳಾದ ನರಕಾಸುರ, ರಾವಣ, ಬಲಿಚಕ್ರವರ್ತಿ, ಹಿರಣ್ಯಾಕ್ಷ, ಹಿರಣ್ಯಕಶಿಪು ಮತ್ತು ಮೌರ್ಯ ಸಾಮ್ರಾಜ್ಯದ ಕೊನೆದೊರೆ ಬೃಹದತ್ತಮೌರ್ಯ ಇಂತಹವನ್ನು ಸ್ಮರಿಸಿಕೊಳ್ಳೊಣ. ಇವರನ್ನು ಕೊಂದ ದಿನಗಳನ್ನೇ ಮನುವಾದಿಗಳು ಹಬ್ಬಗಳನ್ನಾಗಿ ಆಚರಿಸಿ ಸಂಭ್ರಮಿಸುತ್ತಾರೆ, ಅವರೊಟ್ಟಿಗೆ ಶೂದ್ರರು ಸೇರಿ ಆಚರಿಸುತ್ತಿರುವುದು ದುರಂತ ಎಂದರು.

ಕಾರ್ಯಕ್ರಮದಲ್ಲಿ ಬಹುಜನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ವ್ಯವಸ್ಥಾಪಕ ವಜ್ರಮುನಿ ಬಹುಜನ್, ಸಂಯೋಜಕ ಪ್ರಮೋದ್, ಯೋಗೇಶ್‍ಮೌರ್ಯ, ಏಳುಮಲೈ, ಅನುಪಮ, ಪೂಜಾ, ಮೇಘಶ್ರೀ, ವಿಶ್ವನಾಥ್, ಆಟೋ ಗುರುಶಂಕರ್, ಜಯಶಂಕರ್, ಮಲ್ಲಿಕ್, ದೇವರಾಜ್ ದ್ರಾವಿಡ, ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News