×
Ad

ಮತ್ತೆ ದಿನಾಂಕ ಬದಲಾವಣೆ: ಜ.4ರಿಂದ ಕನ್ನಡ ಸಾಹಿತ್ಯ ಸಮ್ಮೇಳನ

Update: 2018-11-09 21:40 IST

ಧಾರವಾಡ, ನ.9: ಜನವರಿ 6, 7, 8 ಕ್ಕೆ ನಿಗದಿಯಾಗಿದ್ದ 84ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ.4, 5, 6ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜ.8ರಂದು ಅಖಿಲ ಭಾರತ ಮಟ್ಟದಲ್ಲಿ ಮುಷ್ಕರ ಇರುವುದರಿಂದ ದಿನಾಂಕ ಬದಲಾವಣೆ ಮಾಡಲಾಗಿದ್ದು, ಸಮ್ಮೇಳನ ನಡೆಯಲಿರುವ ಸ್ಥಳವನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಪರಿಶೀಲಿಸಿದ್ದಾರೆ.

ಧಾರವಾಡದಲ್ಲಿ ನಡೆಯಲಿರುವ 84ನೆ ಕನ್ನಡ ಸಾಹಿತ್ಯ ಸಮ್ಮೇಳನ ಮೊದಲು ನವೆಂಬರ್‌ನಲ್ಲಿ ನಿಗದಿಯಾಗಿತ್ತು. ನಂತರ ಡಿಸೆಂಬರ್ 7, 8, 9ಕ್ಕೆ ಮುಂದೂಡಲ್ಪಟ್ಟಿತ್ತು. ಅದಾದ ಬಳಿಕ ಮತ್ತೆ ಜನವರಿ 6, 7, 8ಕ್ಕೆ ಎಂದು ಹೇಳಲಾಗಿತ್ತು. ಈಗ ಮತ್ತೆ ಬದಲಾವಣೆಯಾಗಿದ್ದು ಜನವರಿ 4, 5, 6ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಒಟ್ಟು ಮೂರು ಬಾರಿ ಸಮ್ಮೇಳನ ದಿನಾಂಕದ ಬದಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News