ದಾವಣಗೆರೆ: ನೋಟು ಅಮಾನ್ಯೀಕರಣ ಖಂಡಿಸಿ ಕಾಂಗ್ರೆಸ್ ನಿಂದ ಕರಾಳ ದಿನ ಆಚರಣೆ

Update: 2018-11-09 17:52 GMT

ದಾವಣಗೆರೆ,ನ.9: ಕಳೆದ 2 ವರುಷಗಳ ಹಿಂದೆ ನೋಟು ಅಮಾನ್ಯೀಕರಣ ಮಾಡಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕರಾಳ ದಿನವನ್ನಾಗಿ ಆಚರಿಸುವ ಮೂಲಕ ಶುಕ್ರವಾರ ಪ್ರತಿಭಟನೆ ನಡೆಸಿತು.

ಮಹಾನಗರ ಪಾಲಿಕೆಯ ಮಹಾತ್ಮಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ನರೇಂದ್ರಮೋದಿ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲಾಗುವಂತೆ ನಿರ್ಣಯ ತೆಗೆದುಕೊಂಡ ನರೇಂದ್ರಮೋದಿ ಸಣ್ಣ ವ್ಯಾಪಾರಸ್ಥರಿಗೆ ತೊಂದರೆ ಕೊಟ್ಟು ಬೃಹತ್ ಉದ್ಯಮಿಗಳಿಗೆ ಅನುಕೂಲ ಮಾಡಿದ್ದಾರೆ ಎಂದು ಆರೋಪಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ನೋಟುಗಳನ್ನು ಅಮಾನ್ಯೀಕರಣಗೊಳಿಸುವ ಮೂಲಕ ಬೃಹತ್ ಉದ್ಯಮಿಗಳ ಪರ ಕ್ರಿಮಿನಲ್ ಸಂಚು ರೂಪಿಸಿದರು. ಅಮಾನ್ಯೀಕರಣ ಘೋಷಣೆ ವೇಳೆ 50 ದಿನದಲ್ಲಿ ಕಪ್ಪು ಹಣ ವಾಪಾಸ್ ತರುತ್ತೇನೆ ಎಂದು ಹೇಳಿದ್ದರು. ಬ್ಯಾಂಕ್ ಮುಂದೆ ತಮ್ಮದೇ ಹಣ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ ನೂರಾರು ಜನರಿಗೆ ಸಾಂತ್ವನ ಹೇಳದಷ್ಟು ಕ್ರೂರತ್ವವನ್ನು ಪ್ರದರ್ಶಿಸಿದರು ಎಂದು ದೂರಿದರು.

ದೇಶದ 130 ಕೋಟಿ ಜನತೆಗೆ ತೊಂದರೆ ನೀಡಿದ ಮೋದಿಗೆ ಕರ್ನಾಟಕದ ಜನತೆ ಮೊನ್ನೆಯ ಉಪಚುನಾವಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಮುಂಬರುವ ಪಂಚರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಮಹಾಪೌರರಾದ ಶೋಭಾ ಪಲ್ಲಾಗಟ್ಟೆ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಹೆಚ್.ಓಬಳೇಶಪ್ಪ ಮತ್ತಿತರರು ಮಾತನಾಡಿದರು.

ಈ ಸಂದರ್ಭ ಉಪ ಮಹಾಪೌರ ಕೆ.ಚಮನ್ ಸಾಬ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಜಿ.ಶಿವಕುಮಾರ್, ಎಂ.ಹಾಲೇಶ್, ಕಾರ್ಯದರ್ಶಿಗಳಾದ ಎ.ನಾಗರಾಜ್, ಎಸ್.ಮಲ್ಲಿಕಾರ್ಜುನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ತಿಪ್ಪಣ್ಣ, ಸುರೇಂದ್ರಮೊಯ್ಲಿ, ಅನ್ನಪೂರ್ಣ ಬಸವರಾಜ್, ಸದಸ್ಯರುಗಳಾದ ಶ್ರೀಮತಿ ಅಶ್ವಿನಿ ಪ್ರಶಾಂತ್, ಶ್ರೀಮತಿ ಅನಿತಾಬಾಯಿ ಮಾಲತೇಶ್, ಗೌಡ್ರು ರಾಜಶೇಖರ್, ಬಸಪ್ಪ, ಜಿ.ಬಿ.ಲಿಂಗರಾಜ್,ಎಲ್.ಎಂ.ಹನುಮಂತಪ್ಪ, ಶ್ರೀಮತಿ ಪುಷ್ಪಲತಾ ಜಗನ್ನಾಥ್, ಮುಖಂಡರುಗಳಾದ ರಮೇಶ್, ಹೆಚ್.ಜಯಣ್ಣ, ಘನಿತಾಹಿರ್, ಅಲ್ಲಾವಲಿ ಘಾಜಿಖಾನ್, ರಾಜೇಶ್ ನೆರ್ಲಿಗೆ, ಅಣಜಿ ಅಂಜಿನಪ್ಪ, ದ್ರಾಕ್ಷಾಯಿಣಮ್ಮ, ಅಲಿರಹಮತ್, ಶಿವಕುಮಾರ್, ರಂಗಸ್ವಾಮಿ, ಅಜ್ಜಪ್ಪ ಪವಾರ್, ಆರೋಗ್ಯಸ್ವಾಮಿ,ಚಂದನ್, ಬಸವರಾಜ್, ಪ್ರವೀಣ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News