ರಾಜು ತಲ್ಲೂರುರನ್ನು ಪಕ್ಷದಿಂದ ಉಚ್ಚಾಟಿಸದಿದ್ದಲ್ಲಿ ಸಾಮೂಹಿಕ ರಾಜೀನಾಮೆ: ಕಾಂಗ್ರೆಸ್ ಮುಂಖಡ ಶಿವಾನಂದಪ್ಪ

Update: 2018-11-09 18:00 GMT

ಸೊರಬ, ನ.9: ಕಾಂಗ್ರೆಸ್ ಮುಖಂಡನೆಂದು ಸುಳ್ಳು ಹೇಳುತ್ತಾ ಜನರಿಗೆ ಮೋಸ ಮಾಡುತ್ತಿರುವ ರಾಜು ತಲ್ಲೂರು ಅವರನ್ನು ಈ ಕೂಡಲೇ ಪಕ್ಷದಿಂದ ಉಚ್ಚಾಟಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಆನವಟ್ಟಿ ಮತ್ತು ಸೊರಬ ಬ್ಲಾಕ್ ಕಾಂಗ್ರೆಸ್‌ನ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆಂದು ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ ಶಿವಾನಂದಪ್ಪ ತಿಳಿಸಿದ್ದಾರೆ.

ಶುಕ್ರವಾರ ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹದಿನೈದು ದಿನ ಬಾಕಿ ಇರುವಾಗ ಪಕ್ಷ ಸೇರ್ಪಡೆಯ ನಾಟಕವಾಡಿ ಸುಳ್ಳು ಹೇಳಿ ಲಾಬಿ ನಡೆಸಿ, ಕಾಣದ ಕೈಗಳ ಸಹಕಾರದಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದರು ಎಂದರು. ತಾಲೂಕಿನ ಸುಮಾರು 25 ಸಾವಿರ ಎಕರೆಗೆ ನೀರು ಹಾಯಿಸಿ ನೀರಾವರಿ ಕಲ್ಪಿಸಿಕೊಟ್ಟಿದ್ದೇನೆ. ತಾಲೂಕಿನ ಸಾವಿರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಟ್ಟಿದಾಗಿ ಡಂಗುರ ಹೊಡೆದುಕೊಳ್ಳುತ್ತಿದಾರೆ. ಸಾವಿರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿದ್ದೇನೆ ಎಂದು ಸುಳ್ಳುಹೇಳುತ್ತಾ ತಿರುಗುತ್ತಿರುವ ಇವರು ಇವರೆಗೂ ಪಕ್ಷದ ಕಚೇರಿಗೆ ಬಂದಿಲ್ಲ ಎಂದು ಆರೋಪಿಸಿದರು.  

ತಾಲೂಕಿನಲ್ಲಿ ಆ ಜಾತಿಯ ಮತಗಳು ಬೇಡ, ಈ ಜಾತಿಯ ಮತಗಳು ಬೇಡ ಎಂದು ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲ ಜಾತಿ ರಾಜಕಾರಣ ಮಾಡುತ್ತಾ, ತಾವು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಮಡಿವಾಳ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ಭೂತಗಳಲ್ಲಿ ಹೆಚ್ಚಿನ ಮತ ಪಡೆದರೂ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಹಿನ್ನಡೆಯಾಗಿದ್ದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ರೀತಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಲಕ್ಷ್ಮೀಕಾಂತ್ ಚಿಮಣೂರು ಮಹಿಳಾ ಬ್ಲಾಕ್ ಅಧ್ಯಕ್ಷೆ ಸುಮಾ ಗಜಾನನ, ಯುವ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ, ಮುಖಂಡರಾದ ಕಲ್ಲಪ್ಪ ಗೋಪಾಲಪ್ಪ ರಾಯನ್, ಕಾರ್ಯದರ್ಶಿ ಕರಿಯಪ್ಪ, ಹಿರೇಕೌಂಶಿ ರಶೀದ್, ಇ.ಎಚ್.ಮಂಜುನಾಥ್, ಹುಚ್ಚಪ್ಪಚಿಮಣೂರ್, ಸಾಜೀದ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News