ಟಿಪ್ಪು ಸುಲ್ತಾನ್ ಅಪ್ಪಟ ದೇಶಪ್ರೇಮಿ: ಶಾಸಕ ಸುಬ್ಬಾರೆಡ್ಡಿ

Update: 2018-11-10 11:51 GMT

ಬಾಗೇಪಲ್ಲಿ,ನ.10: ಹಝ್ರತ್ ಟಿಪ್ಪು ಸುಲ್ತಾನ್ ಅವರೊಬ್ಬ ಅಪ್ಪಟ ದೇಶಪ್ರೇಮಿ, ದೇಶದ್ರೋಹಿಯಲ್ಲ. ಆದರೆ ಇಂದು ಮೂಲಭೂತವಾದಿಗಳು ದೇಶದ್ರೋಹದ ಪಟ್ಟ ಕಟ್ಟುತ್ತಿದ್ದಾರೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್ ಅವರ 289 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೆಲವು ಮೂಲಭೂತವಾದಿಗಳು ಟಿಪ್ಪು ಸುಲ್ತಾನ್ ಅವರ ವಿರುದ್ಧ ಅವನೊಬ್ಬ ಮತಾಂದ, ದೇಶದ್ರೋಹಿ ಎಂದು ಅಪಪ್ರಚಾರ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅವರೊಬ್ಬ ಮತಾಂಧನಾಗಿದ್ದರೆ ರಾಜ್ಯದಲ್ಲಿ ಹಿಂದು ದೇವಾಲಯಗಳನ್ನು ನಿರ್ಮಾಣ ಮಾಡುತ್ತಿರಲಿಲ್ಲ. ಆದೇವಾಲಯಗಳಿಗೆ ರಕ್ಷಣೆ ನೀಡುತ್ತಿರಲಿಲ್ಲ. ಅಂತಹ ವೀರಯೋಧನಿಗೆ ದರ್ಮಾಂಧ ಎಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆ ಎಂದರು.

ತಹಶೀಲ್ದಾರ್ ಮಹಮ್ಮದ್ ಅಸ್ಲಂ ಮಾತನಾಡಿ, ಟಿಪ್ಪು ಸುಲ್ತಾನ್ ಅವರ ಆಡಳಿತದಲ್ಲಿ ಆಗಿರುವ ಕೆಲ ಭೂಸೂಧಾರಣೆಗಳನ್ನು ಹಾಗೂ ಕೆಲವು ಯೋಜನೆಗಳನ್ನು ಇಂದಿಗೂ ನಾವು ನೋಡಬಹುದಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಮಕ್ಕಳನ್ನು ಒತ್ತೆ ಇಡಬೇಕಾದ ಪರಿಸ್ಥಿತಿ ಬಂದರೂ ದೃತಿಗೆಡಲಿಲ್ಲ. ದೈರ್ಯವಾಗಿ ಹೋರಾಡಿ ವೀರಮರಣವನ್ನು ಅಪ್ಪಿ ಮೈಸೂರು ಹುಲಿ ಎಂದು ಪ್ರಖ್ಯಾತಿ ಪಡೆದಿದ್ದರು ಎಂದರು.

ಈ ಸಂದರ್ಭ ಜಿಪಂ ಸದಸ್ಯ ಬೂರಗಮಡಗು ನರಸಿಂಹಪ್ಪ, ತಾಪಂ ಇಓ ಕೆ.ವಿ.ರೆಡ್ಡಪ್ಪ ಉಪಾಧ್ಯಕ್ಷೆ ಸರಸ್ವತಮ್ಮ, ಮುಖ್ಯ ಭಾಷಣಕಾರ ಡಾ.ನಯಾಜ್ ಅಹಮದ್, ಸರ್ಕಲ್ ಇನ್ಸ್ ಪೆಕ್ಟರ್ ನಯಾಜ್ ಬೇಗ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಜಯರಾಂ, ಪುರಸಭೆ ಅಧ್ಯಕ್ಷೆ ಮಮತಮ್ಮ, ಉಪಾಧ್ಯಕ್ಷೆ ಹುಸೇನ್.ಬಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ಬಿವಿ.ವೆಂಕಟರವಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಜಿ.ಸುಧಾಕರ್, ಮುಖಂಡರಾದ ರಿಜ್ವಾನ್ ಸಾಬ್, ಕಲೀಮುಲ್ಲಾ, ಬಶೀರ್ ಅಹಮದ್, ನಿಸಾರ್ ಅಹಮದ್, ಇನಾಯಿತುಲ್ಲಾ, ಶಬ್ಬೀರ್, ಅನ್ಸರ್, ಗುಲ್ನಾಜ್ ಬೇಗಂ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News