ದಾವಣಗೆರೆ: ಕಾರು-ಬೈಕ್ ನಡುವೆ ಅಪಘಾತ; ಸವಾರ ಮೃತ್ಯು
Update: 2018-11-10 22:17 IST
ದಾವಣಗೆರೆ,ನ.10: ಕಾರು ಹಾಗೂ ಬೈಕ್ ನಡುವೆ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಳೇ ಬಾತಿ ಬಳಿಯ ಎನ್‍ಎಚ್4 ಬಳಿ ಶನಿವಾರ ನಡೆದಿದೆ.
ಹಳೇಬಾತಿ ಗ್ರಾಮದ ವಿರೇಶ್(35) ಸಾವನ್ನಪ್ಪಿದ ಬೈಕ್ ಸವಾರ. ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ವೀರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಈ ಕೂಡಲೇ ಸರ್ವಿಸ್ ರಸ್ತೆ ನಿರ್ಮಿಸುವಂತೆ ಹೆದ್ದಾರಿ ಬಂದ್ ಮಾಡಿ ಬಾತಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದರು.