ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಮೇಲೆ ದಾಳಿಗೆ ಸಂಚು: ನಾಲ್ವರು ಫ್ರೆಂಚ್ ಬಲಪಂಥೀಯರ ಬಂಧನ

Update: 2018-11-11 17:21 GMT

 ಪ್ಯಾರಿಸ್,ನ.11: ಪ್ರಥಮ ವಿಶ್ವಮಹಾಸಮರದ ಸ್ಮರಣಾರ್ಥವಾಗಿ ನಡೆಯುವ ಕಾರ್ಯಕ್ರಮದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೊನ್ ಮೇಲೆ ದಾಳಿ ನಡೆಸಲು ಸಂಚು ಹೂಡಿರುವ ಶಂಕೆಯಲ್ಲಿ ಫ್ರಾನ್ಸ್‌ನ ತೀವ್ರವಾದಿ ಬಲಪಂಥೀಯ ಗುಂಪಿನ ಜೊತೆ ನಂಟು ಹೊಂದಿರುವ ನಾಲ್ವರನ್ನು  ಬಂಧಿಸಲಾಗಿದೆ.

  22ರಿಂದ 62 ವರ್ಷದೊಳಗಿನ ಈ ನಾಲ್ವರು ಬಂಧಿತ ಆರೋಪಿಗಳನ್ನು ಪ್ಯಾರಿಸ್‌ನಲ್ಲಿರುವ ಭಯೋತ್ಪಾದನಾ ನಿಗ್ರಹ ನ್ಯಾಯಾಧೀಶರ ಮುಂದೆ ಇಂದು ಹಾಜರುಪಡಿಸಲಾಯಿತು. ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿರುವ ಹಾಗೂ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ.

 ಈ ನಾಲ್ವರನ್ನು ಮಂಗಳವಾರ ಬಂಧಿಸಲಾಗಿದ್ದು, ಅವರಲ್ಲಿ ಒಬ್ಬಾತ ಆಗ್ನೇಯ ಫ್ರಾನ್ಸ್‌ನ ನಿವಾಸಿಯಾಗಿದ್ದು, ಆತನ ಬಳಿ ಚಾಕುವೊಂದು ಪತ್ತೆಯಾಗಿದೆ. ಪೂರ್ವ ಫ್ರಾನ್ಸ್‌ನ ಮೊಸೆಲ್ಲೆ ನಗರಕ್ಕೆ ಪ್ರಯಾಣಿಸಿದ್ದ ಈತ ಇತರ ಮೂವರು ಶಂಕಿತರನ್ನು ಭೇಟಿಯಾಗಿ,ಫ್ರೆಂಚ್ ಅಧ್ಯಕ್ಷರ ಮೇಲೆ ದಾಳಿಗೆ ಸಂಚು ಹೂಡಿದ್ದನೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News