ಅನಂತ್‍ ಕುಮಾರ್ ರೈತರು, ಜನಸಾಮಾನ್ಯರ ಧ್ವನಿ: ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್

Update: 2018-11-12 16:59 GMT

ಮೂಡಿಗೆರೆ, ನ.12: ರಾಷ್ಟ್ರೀಯ ಚೇತನ ಅನಂತ್‍ ಕುಮಾರ್ ರೈತರು ಜನಸಮಾನ್ಯರ ಪರವಾಗಿ ಹೋರಾಟ ಮಾಡಿದ್ದು, ಅವರ ಅಕಾಲಿಕ ನಿಧನ ದೇಶಕ್ಕೆ ನಷ್ಟವಾಗಿದೆ. ಅವರು ಬಿಟ್ಟು ಹೋದ ದಾರಿ, ಮಾಡಿದ ಕೆಲಸ ನಮಗೆ ಮಾದರಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ತಿಳಿಸಿದರು. 

ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಎರ್ಪಡಿಸಿದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿ, ಪಕ್ಷದ ವಿವಿದ ಸಂಘಟನೆಗಳ ಮೂಲಕ, ಕಾರ್ಯಪ್ರರಂಭಿಸಿದ ಅನಂತ್ ಕುಮಾರ್ ರವರು, ಎಬಿವಿಪಿ ಮತ್ತು ಹುಬ್ಬಳ್ಳಿ ದ್ವಜ ಹೋರಾಟದಿಂದ ಪ್ರಾರಂಭಿಸಿ ಅವರು ಮಾಡಿದ ಕಾರ್ಯಗಳು ಅಪಾರ. ಅಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸಂಪರ್ಕ ಕೊಂಡಿಯಾಗಿದ್ದ ಅವರು, ಪಕ್ಷದ ಸಂಘಟನೆಗಾಗಿ ಸರ್ವಸ್ವವನ್ನೂ ತ್ಯಾಗಮಾಡಲು ಮುಂದಾಗಿದ್ದರೆಂದರು.

ಕೇಂದ್ರ ಸಚಿವರಾದ ನಂತರ ರೈತರಿಗೆ ಸಾಕಷ್ಟು ರಸಗೊಬ್ಬರ ಸಮಯಕ್ಕೆ ಸರಿಯಾಗಿ ದೊರೆಯುವಂತೆ ಮಾಡಿದ್ದಲ್ಲದೆ, ಯೂರಿಯಾ ಗೊಬ್ಬರ ಕಾಳ ಸಂತೆಯಲ್ಲಿ ದುರುಪಯೋಗವಾಗದಂತೆ ಬೇವು ಲೇಪನ, ಬೆಲೆ ಇಳಿಕೆ, ಅಲ್ಲದೆ ಕಡಿಮೆ ಬೆಲೆಯ ಜನರಿಕ್ ಔಷದ, ಹೃದಯದ ಸ್ಟಂಟ್‍ಗಳು, ಮಂಡಿ ಚಿಪ್ಪುಗಳು, ಕ್ಯಾನ್ಸರ್ ಸೇರಿದಂತೆ ಅನೇಕ ಔಷದಗಳ ಬೆಲೆ ಇಳಿಕೆಯೊಂದಿಗೆ ಬಡವರು ದೀನ ದಲಿತರ ಎಳಿಗೆಗೆ ಶ್ರಮಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಾಫಿ ಮತ್ತು ಕಾಳು ಮೆಣಸು ಉದ್ಯಮದ ಎಳಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದರು ಎಂದರು.

ಈ ಸಂಧರ್ಭದಲ್ಲಿ ಕೆಂಜಿಗೆ ಕೇಶವ್, ಜಯಂತ್‍ ಬಿದರಹಳ್ಳಿ, ಮಂಡಲ ಅಧ್ಯಕ್ಷ ಪ್ರಮೋದ್‍ ದುಂಡುಗ ಮಾತನಾಡಿದರು. ಜಿ.ಪಂ ಸದಸ್ಯ ಶಾಮಣ್ಣ, ಪ.ಪಂ ಸದಸ್ಯೆ ಲತಾಲಕ್ಷಣ್, ಡಿ.ಎಸ್ ಸುರೇಂದ್ರ, ಅಶಾಮೋಹನ್ ಸರೋಜ ಸುರೇಂದ್ರ, ವಿನೋದ್‍ ಕಣಚೂರು, ಗಜೇಂದ್ರತರುವೆ, ನಯನ ತಳವಾರ,  ಜಯಪಾಲ್‍ ಬಿದ್ರಳ್ಳಿ, ಪಟೇಲ್‍ ಮಂಜು, ಸಂದರ್ಷ, ಗಿರಿಶ್, ಪಂಚಾಕ್ಷರಿ, ರಾಮೆಗೌಡ, ಲಕ್ಷಣ್‍ ಶೆಟ್ಟಿ, ವಿನಯ್‍ ಹಳೆಕೋಟೆ, ಪ್ರವೀಣ್‍ ಪುಜಾರಿ, ಪರಿಕ್ಷಿತ್, ದನಿಕ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News