×
Ad

ನ.16ರಂದು ಪತ್ರಕರ್ತರಿಗೆ ವಿಶೇಷ ಮಾಹಿತಿ ಕಾರ್ಯಾಗಾರ

Update: 2018-11-13 22:36 IST

ಬೆಂಗಳೂರು, ನ.13: ಕರ್ನಾಟಕ ಅರಣ್ಯ ಇಲಾಖೆಯು ಮಲೆ ಮಹದೇಶ್ವರ ಬೆಟ್ಟ, ವನ್ಯಜೀವಿ ವಿಭಾಗ, ಗೋಪಿನಾಥಂನಲ್ಲಿ ನ.16 ಮತ್ತು 17 ರಂದು ಪತ್ರಕರ್ತರಿಗಾಗಿ ವಿಶೇಷ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ಈ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಾಗಾರದಲ್ಲಿ ಅರಣ್ಯಾಧಿಕಾರಿಗಳು, ವಿಜ್ಞಾನಿಗಳು ಹಾಗೂ ವನ್ಯಜೀವಿ ಪ್ರೇಮಿಗಳು ವಿಚಾರಗಳನ್ನು ಮಂಡಿಸಲಿದ್ದಾರೆ. ಕಾರ್ಯಾಗಾರದ ಅಂಗವಾಗಿ ಕಾಡಿನ ಕೆಲ ಪ್ರದೇಶಗಳಿಗೆ, ಕೆಲ ಹಳ್ಳಿಗಳಿಗೆ ಭೇಟಿ ಸಹ ಏರ್ಪಡಿಸಿ ವಿಚಾರಗಳನ್ನು ಕ್ಷೇತ್ರ ಪ್ರಾತ್ಯಕ್ಷಿಕೆ ಮೂಲಕವೂ ತಿಳಿಸಿಕೊಡುವ ಯೋಜನೆ ರೂಪಿಸಲಾಗಿದೆ. ವಿಶೇಷ ಮಾಹಿತಿ ಕಾರ್ಯಾಗಾರಕ್ಕೆ ಮಾಧ್ಯಮ ಸಂಸ್ಥೆಯಿಂದ ಒಬ್ಬ ಹಿರಿಯ ವರದಿಗಾರರು/ಹಿರಿಯ ಉಪ ಸಂಪಾದಕರನ್ನು ಈ ಕಾರ್ಯಾಗಾರಕ್ಕೆ ಕಳುಸಿಕೊಡುವಂತೆ ಹಾಗೂ ನಿಯೋಜಿಸಿದ ಪತ್ರಕರ್ತರ ಹೆಸರು, ಹುದ್ದೆ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಅನ್ನು apccfci@gmail.com ನ.14 ರ ಒಳಗಡೆ ಕಳುಹಿಸಬೇಕಾಗಿ ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಏಡುಕೊಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಲೆಮಹದೇಶ್ವರ ಬೆಟ್ಟ, ವನ್ಯಜೀವಿ ವಿಭಾಗ, ಕೊಳ್ಳೇಗಾಲ, ಮೊ. 9410956294 ಇ-ಮೇಲ್ kv_kondal@yahoo.com, mailto:kv_kondal@yahoo.com  ಗೆ ಸಂಪರ್ಕಿಸಲು ಪ್ರಕಟನೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News