×
Ad

ಶಾಸಕರ ಅನುದಾನದಲ್ಲಿ ಕೊಡಗಿಗೆ 25 ಲಕ್ಷ ರೂ. ಅನುದಾನ: ಶಾಸಕ ತನ್ವೀರ್ ಸೇಠ್

Update: 2018-11-13 23:23 IST

ಮೈಸೂರು,ನ.13: ಕುಂಭದ್ರೋಣ ಮಳೆಯ ನೆರೆಯಿಂದ ತೀವ್ರ ಹಾನಿಗೊಳಗಾಗಿರುವ ಕೊಡಗು ಜಿಲ್ಲಾ ಪುನರ್ ನಿರ್ಮಾಣಕ್ಕೆ ಶಾಸಕ ತನ್ವೀರ್ ಸೇಠ್ ಅವರು 25 ಲಕ್ಷ ರೂ.ಗಳ ಅನುದಾನ ನೀಡಲು ರಾಜ್ಯ ಸರ್ಕಾರಕ್ಕೆ ಕೋರಿದ್ದಾರೆ.

ಶಾಸಕ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಪರಿಷ್ಕೃತ ಮಾರ್ಗಸೂಚಿ 2014ರ ಕಂಡಿಕೆ 2.13 ಅನ್ನು ತಿದ್ದುಪಡಿ ಮಾಡಿ ಆದೇಶ ಹೊರಡಿಸಿರುವ ಮೇರೆಗೆ ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕೆಂದು ಪ್ರಸಕ್ತ ಸಾಲಿನ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ರೂ.25 ಲಕ್ಷಗಳನ್ನು ನೀಡಲು ಮುಂದಾಗಿದ್ದು,  ಈ ಬಗ್ಗೆ ಕೊಡಗು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಲಾಗಿದೆ ಎಂದು ಶಾಸಕ ತನ್ವೀರ್ ಸೇಠ್ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News