ಕಾರ್ಮಿಕರ ಪಾದಯಾತ್ರೆಗೆ ಮದ್ದೂರಿನಲ್ಲಿ ಸ್ವಾಗತ

Update: 2018-11-13 18:21 GMT

ಮಂಡ್ಯ, ನ.13: ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿನ್ಯಾಸ್ ಇನ್ನೋವೇಟಿವ್ ಪ್ರೈ.ಲಿ.ನ 92 ಜನ ಕಾರ್ಮಿಕರನ್ನು ಬೇರೆ ಘಟಕಕ್ಕೆ  ವರ್ಗ ಮಾಡಿರುವುದನ್ನು ವಿರೋಧಿಸಿ ಕಾರ್ಮಿಕರು ಕಾರ್ಮಿಕ ಸಂಘಟನೆಗಳೊಂದಿಗೆ ಬೆಂಗಳೂರಿನ ಮುಖ್ಯಮಂತ್ರಿ ಕಚೇರಿವರೆಗೂ ಹಮ್ಮಿಕೊಂಡಿರುವ ಪಾದಯಾತ್ರೆ ಮಂಗಳವಾರ ಮದ್ದೂರಿಗೆ ಆಗಮಿಸಿತು.

ಉದ್ದೇಶ ಪೂರ್ವಕವಾಗಿ ಕಾರ್ಮಿಕರನ್ನು ಆಂಧ್ರಪ್ರದೇಶದ ವಿಕೃತಮಾಲ ಎಂಬ ಸ್ಥಳದಲ್ಲಿರುವ ಮತ್ತೊಂದು ಘಟಕ್ಕೆ ವರ್ಗಾವಣೆ ಮಾಡಿ ಕಿರುಕುಳ ನೀಡಲಾಗುತ್ತಿದೆ.  ಅಲ್ಲಿಯ ಕಂಪನಿ ಸರಕಾರದ ಷರತ್ತು ಮತ್ತು ಒಪ್ಪಂದಗಳ ನಿಯಮಗಳನ್ನು ಪಾಲಿಸುತ್ತಿಲ್ಲ. ಹಾಗಾಗಿ ಸರಕಾರ ಕಂಪನಿಗೆ ಬೀಗಮುದ್ರೆ ಹಾಕಿದೆ. ಆದರೂ ಅಲ್ಲಿಗೆ ವರ್ಗ ಮಾಡಲಾಗಿದೆ. ಜತೆಗೆ 5 ತಿಂಗಳುಗಳಿಂದ ಸಂಬಳ ನೀಡಿಲ್ಲ. ಈ ವಿಷಯನ್ನು ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ತರಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕರು ತಿಳಿಸಿದರು.

ಸಿಐಟಿಯು ತಾಲೂಕು ಅಧ್ಯಕ್ಷ ಗೆಜ್ಜಲಗೆರೆ ಜಿ.ಆರ್.ರಾಮು, ಪ್ರಧಾನ ಕಾರ್ಯದರ್ಶಿ ಎಂ.ರಾಜು, ಕಾರ್ಯದರ್ಶಿಗಳಾದ ಜಯಶೀಲ, ಶಶಿಕುಮಾರ್, ಕೆಪಿಆರ್‍ಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಯಶವಂತ್, ಮುಖಂಡರಾದ ಮಂಜುಳಾರಾಜ್, ರೋಹಿಣಿ, ಮುಕ್ಬಲ್ ಪಾಷ್, ಶಿವಕುಮಾರ್ ಪಾದಯಾತ್ರೆಯನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News