ದೀಪಾವಳಿ ಕುರಿತು ಟ್ವೀಟ್‌ ಮಾಡಿ ವಿವಾದ ಸೃಷ್ಟಿಸಿದ ಟ್ರಂಪ್ !

Update: 2018-11-14 13:41 GMT

ವಾಶಿಂಗ್ಟನ್, ನ. 14: ‘ದೀಪಾವಳಿ ಬೌದ್ಧರು, ಸಿಖ್ಖರು ಮತ್ತು ಜೈನರು ಆಚರಿಸುವ ಹಬ್ಬ’ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಟ್ವೀಟ್ ಒಂದು ಚರ್ಚೆಗೆ ಗ್ರಾಸ ಒದಗಿಸಿತು. ಯಾಕೆಂದರೆ, ದೀಪಾವಳಿಯನ್ನು ಪ್ರಧಾನವಾಗಿ ಆಚರಿಸುವ ಹಿಂದೂಗಳ ಉಲ್ಲೇಖ ಅಲ್ಲಿರಲಿಲ್ಲ.

ಆದಾಗ್ಯೂ, ಇದನ್ನು ಸರಿಪಡಿಸಲೋಸುಗವೆಂಬಂತೆ ‘‘ಹಿಂದೂಗಳ ದೀಪಗಳ ಹಬ್ಬ ದೀಪಾವಳಿಯನ್ನು ಶ್ವೇತಭವನದ ರೂಸ್‌ವೆಲ್ಟ್ ಕೋಣೆಯಲ್ಲಿ ಇಂದು ಮಧ್ಯಾಹ್ನ ಆಚರಿಸುವ ಶ್ರೇಷ್ಠ ಗೌರವ ನನಗೆ ಲಭಿಸಿತು. ತುಂಬಾ ತುಂಬಾ ವಿಶೇಷ ಜನ ಅವರು!’’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಟ್ರಂಪ್ ಹೇಳಿದರು.

ಅದೂ ಅಲ್ಲದೆ, ಶ್ವೇತಭವನದಲ್ಲಿ ನಡೆದ ದೀಪಾವಳಿ ಆಚರಣೆಯಲ್ಲಿ ಹಿಂದೂ ಧರ್ಮದ ಪ್ರಸ್ತಾಪದೊಂದಿಗೆ ಅವರು ತನ್ನ ಭಾಷಣವನ್ನು ಆರಂಭಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News