ಮಂಡ್ಯ: ನಾಲೆಯಲ್ಲಿ ಪ್ರೇಮಿಗಳ ಶವ ಪತ್ತೆ

Update: 2018-11-15 17:48 GMT

ಮಂಡ್ಯ, ನ.15: ಮಳವಳ್ಳಿ ತಾಲೂಕು ಶಿವನಸಮುದ್ರ ನಾಲೆಯಲ್ಲಿ ಎರಡು ದಿನಗಳ ಅಂತರದಲ್ಲಿ ತಮಿಳುನಾಡು ಮೂಲದ ಪ್ರೇಮಿಗಳ ಶವ ಪತ್ತೆಯಾಗಿದ್ದು, ಪೊಲೀಸರು ಕೊಲೆಯಾಗಿರಬಹುದೆಂದು ಶಂಕಿಸಿದ್ದಾರೆ.

ಇದೇ ಸ್ಥಳದಲ್ಲಿ ಎರಡು ದಿನಗಳ ಹಿಂದೆ ಕೈಕಾಲು ಕಟ್ಟಿದ ಯುವಕನ ಶವ ಪತ್ತೆಯಾಗಿತ್ತು. ಗುರುವಾರ ಅದೇ ನಾಲೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದೆ. 

ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News