ಕೊಳ್ಳೇಗಾಲ: ಜಮೀನಿನಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Update: 2018-11-15 18:28 GMT

ಕೊಳ್ಳೇಗಾಲ,ನ.15: ಅಕ್ರಮವಾಗಿ ಗಾಂಜಾಗಿಡ ಬೆಳೆದಿದ್ದ ವ್ಯಕ್ತಿಯನ್ನು ಮಾಲು ಸಮೇತ ಗುರುವಾರ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಮೇಗಲದೊಡ್ಡಿಯ ನಿವಾಸಿ ಡೊನಮಿಕ್(50) ಎಂಬಾತನನ್ನು ಬಂಧಿಸಿದ್ದಾರೆ. ಸುಮಾರು 17 ಕೆ.ಜಿ ತೂಕದ 30 ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.

ಮೇಗಲದೊಡ್ಡಿ ಗ್ರಾಮದಲ್ಲಿ ಆಂಧ್ರ ಮೂಲದ ಶ್ರೀನಿವಾಸ್ ಎಂಬವರ ಜಮೀನನ್ನು ಗುತ್ತಿಗೆ ಪಡೆದಿದ್ದ ಡೊನಮಿಕ್, ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಡಿವೈಎಸ್‍ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು 30 ಗಾಂಜಾ ಗಿಡಗಳ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಕರಣವನ್ನು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ದಾಳಿಯಲ್ಲಿ ಸಿಪಿಐ ಡಿ.ಜಿ.ರಾಜಣ್ಣ, ಗ್ರಾಮಾಂತರ ಪೊಲೀಸ್ ಠಾಣಾ ಎಸ್‍ಐ ವನರಾಜು, ಎಎಸ್‍ಐ ಚಲುವರಾಜು, ಮುಖ್ಯಪೇದೆ ರಘು, ಗೋವಿಂದರಾಜು,  ಲೋಕೇಶ್, ಪೇದೆ ಶಂಕರ್, ರಘು, ವೆಂಕಟೇಶ್, ನಾಗಮ್ಮ ಸೇರಿದಂತೆ ಇನ್ನಿತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News