ಸರ್ವಪಕ್ಷ ಸಭೆ ನಡೆಸಿದ ಸಿರಿಸೇನಾ

Update: 2018-11-18 16:50 GMT

ಕೊಲಂಬೊ, ನ.18: ಕಳೆದ ತಿಂಗಳು ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಉಚ್ಚಾಟಿಸುವ ತನ್ನ ವಿವಾದಾತ್ಮಕ ನಿರ್ಧಾರದಿಂದ ಭುಗಿಲೆದ್ದಿರುವ ರಾಜಕೀಯ ಬಿಕ್ಕಟ್ಟಿಗೆ ಕೊನೆಹಾಡಲು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ರವಿವಾರ ಸರ್ವ ಪಕ್ಷ ಸಭೆ ನಡೆಸಿದರು.

ರನಿಲ್ ವಿಕ್ರಮಸಿಂಘೆ ಪದಚ್ಯುತಿಯ ಬಳಿಕ ಶ್ರೀಲಂಕಾ ಸಂಸತ್ ಅಧಿವೇಶನದಲ್ಲಿ ಸಂಸದರು ಕುರ್ಚಿಗಳನ್ನು ಎಸೆದು, ಪರಸ್ಪರ ಹೊಡೆದಾಡಿಕೊಂಡ ಹಾಗೂ ಖಾರಪುಡಿ ಎಸೆದ ಘಟನೆಗಳ ಬಳಿಕ ಈ ಮಾತುಕತೆ ನಡೆದಿದೆ.

ಅಕ್ಟೋಬರ್ 26ರಂದು ರಾಜಕೀಯ ಬಿಕ್ಕಟ್ಟು ಭುಗಿಲೆದ್ದ ಬಳಿಕ ಸಿರಿಸೇನಾ, ವಿಕ್ರಮಸಿಂಘೆ ಹಾಗೂ ರಾಜಪಕ್ಷ ಮುಖಾಮುಖಿ ಭೇಟಿಯಾಗಿರುವುದು ಇದು ಮೊದಲ ಸಲವಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಅಧ್ಯಕ್ಷ ಸಿರಿಸೇನಾ ಅವರು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ, ಅವರ ಸ್ಥಾನದಲ್ಲಿ ಮಹೀಂದಾ ರಾಜಪಕ್ಷ ಅವರನ್ನು ನೇಮಿಸಿದ ಬೆನ್ನಲ್ಲೇ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಆನಂತರ ಸಿರಿಸೇನಾ ಸಂಸತ್ ಉಚ್ಚಾಟಿಸಿ, ದಿಢೀರ್ ಚುನಾವಣೆಯನ್ನು ಘೋಷಿಸಿದ್ದು. ಆದರೆ ಸುಪ್ರೀಂಕೋರ್ಟ್ ಮಂಗಳವಾರ ಸುಪ್ರೀಂಕೋರ್ಟ್ ವಿಸರ್ಜಿಸುವ ಸಿರಿಸೇನಾರ ನಿರ್ಧಾರವನ್ನು ತಿರಸ್ಕರಿಸಿತ್ತು ಹಾಗೂ ಜನವರಿ 5ರಂದು ದಿಢೀರ್ ಚುನಾವಣೆ ನಡೆಸುವ ನಿರ್ಧಾರಕ್ಕೆ ತಡೆಯೊಡ್ಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News