ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ; ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ

Update: 2018-11-20 12:41 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ,ನ.20: ನ.21ರಂದು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ನಗರದಲ್ಲಿ ಮೆರವಣಿಗೆ ನಡೆಲಿದ್ದಾರೆ. ಗಾಂಧಿಬಜಾರ್ ರಸ್ತೆಯಲ್ಲಿರುವ ಜಾಮಿಯ ಮಸೀದಿಯಿಂದ ಪ್ರಾರಂಭವಾಗುವ ಮೆರವಣಿಗೆಯು ಗಾಂಧಿಬಜಾರ್ 2ನೇ ಕ್ರಾಸ್, ಲಷ್ಕರ್ ಮೊಹಲ್ಲಾ ಮುಖ್ಯರಸ್ತೆಯು ಮುಖಾಂತರ ಪೆನ್‍ಷನ್ ಮೊಹಲ್ಲಾ, ಬಿ.ಹೆಚ್.ರಸ್ತೆ, ಮೀನಾಕ್ಷಿ ಭವನ, ಟ್ಯಾಂಕ್ ಮೊಹಲ್ಲಾ, ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತ, ಗೋಪಿ ವೃತ್ತ ಮುಖಾಂತರವಾಗಿ ಅಮೀರ್ ಅಹಮದ್ ಸರ್ಕಲ್, ಅಶೋಕ ರಸ್ತೆ ಮಾರ್ಗವಾಗಿ ನ್ಯೂ ಮಂಡ್ಲಿ ತಲುಪಲಿದೆ. 

ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸುವುದರಿಂದ, ನಗರ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ನ. 21 ರಂದು ಒಂದು ದಿನ ತಾತ್ಕಾಲಿಕವಾಗಿ ಈ ಕೆಳಕಂಡ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ವಾಹನಗಳ ಮಾರ್ಗ ಬದಲಾವಣೆಯ ವಿವರ: ಮೆರವಣಿಗೆ ಮಾರ್ಗದಲ್ಲಿ ಮತ್ತು ಮಾರ್ಗ ಸುತ್ತಮುತ್ತ 100 ಮೀ. ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇದಿಸಿದೆ. ಭದ್ರಾವತಿ, ಬೆಂಗಳೂರು ಕಡೆಯಿಂದ ಬರುವ ಎಲ್ಲಾ ವಾಹನಗಳನ್ನು ಬೈಪಾಸ್ ರಸ್ತೆಯ ಮೂಲಕ ನ್ಯೂಮಂಡ್ಲಿ ಸರ್ಕಲ್, ಕೆಎಸ್‍ಆರ್‍ಟಿಸಿ ಡಿಪೋ, ಅಶೋಕ ಸರ್ಕಲ್, ಅಥವಾ 100 ಅಡಿ ರಸ್ತೆ, ಗೋಪಾಳ ಆಲ್ಕೋಳ ಸರ್ಕಲ್ ಮುಖಾಂತರವಾಗಿ ಸಾಗರ ರಸ್ತೆಗೆ ಮಾರ್ಗ ಬದಲಾವಣೆ. ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಎಲ್ಲಾ ವಾಹನಗಳನ್ನು ಎಂ.ಆರ್‍ಎಸ್ ಬೈಪಾಸ್ ರಸ್ತೆ, ನ್ಯೂಮಂಡ್ಲಿ ಸರ್ಕಲ್, ಕೆಎಸ್‍ಆರ್‍ಟಿಸಿ ಡಿಪೋ, ಅಶೋಕ ಸರ್ಕಲ್, ಅಥವಾ 100 ಅಡಿ ರಸ್ತೆ, ಗೋಪಾಳ ಆಲ್ಕೋಳ ಸರ್ಕಲ್ ಮೂಖಾಂತರವಾಗಿ ಸಾಗರ ರಸ್ತೆಗೆ ಮಾರ್ಗ ಬದಲಾವಣೆ. ಹೊನ್ನಾಳಿ ಕಡೆಯಿಂದ ಬರುವ ಎಲ್ಲಾ ವಾಹನಗಳನ್ನು ಶಂಕರಮಠ ಸರ್ಕಲ್, ಹೊಳೆಹೊನ್ನೂರು ಸರ್ಕಲ್, ಎಂ.ಆರ್‍ಎಸ್ ಬೈಪಾಸ್ ರಸ್ತೆ, ನ್ಯೂಮಂಡ್ಲಿ ಸರ್ಕಲ್, ಕೆಎಸ್‍ಆರ್‍ಟಿಸಿ ಡಿಪೋ, ಅಶೋಕ ಸರ್ಕಲ್, ಅಥವಾ 100 ಅಡಿ ರಸ್ತೆ, ಗೋಪಾಳ ಆಲ್ಕೋಳ ಸರ್ಕಲ್ ಮೂಖಾಂತರವಾಗಿ ಸಾಗರ ರಸ್ತೆಗೆ ಮಾರ್ಗ ಬದಲಾವಣೆ.

ಶಿಕಾರಿಪುರ, ಸವಳಂಗ ಕಡೆಯಿಂದ ಬರುವ ಎಲ್ಲಾ ವಾಹನಗಳನ್ನು ಉಷಾ ನರ್ಸಿಂಗ್ ಹೋಂ, ಲಕ್ಷ್ಮೀ ಟಾಕೀಸ್, ಪೊಲೀಸ್ ಚೌಕಿ, ಆಲ್ಕೊಳ ಸರ್ಕಲ್ ಮುಖಾಂತರ ಸಾಗರ ರಸ್ತೆಗೆ ಬದಲಾವಣೆ.  ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಶೀಕಾರಿಪುರ, ಸೊರಬ, ಹರಿಹರ, ದಾವಣಗೆರೆಗೆ ಹೋಗುವ ಎಲ್ಲಾ ವಾಹನಗಳನ್ನು ಸಾಗರ ರಸ್ತೆ ಮುಖಾಂತರವಾಗಿ ಹೆಲಿಪ್ಯಾಡ್ ಸರ್ಕಲ್, ಆಲ್ಕೊಳ ಸರ್ಕಲ್, ಪೊಲೀಸ್ ಚೌಕಿ, ಉಷಾ ನರ್ಸಿಂಗ್ ಹೋಂ, ಸವಳಂಗ ರಸ್ತೆ ಮುಖಾಂತರ ಮಾರ್ಗ ಬದಲಾವಣೆ. ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲಾ ವಾಹನಗಳನ್ನು ಬೈಪಾಸ್ ಮುಖಾಂತರ ಎಂಆರ್‍ಎಸ್ ಸರ್ಕಲ್ ಕಡೆಗೆ ಮಾರ್ಗ ಬದಲಾವಣೆ. ಲಷ್ಕರ್ ಮೊಲ್ಲಾ ರಸ್ತೆ ಎಲ್ಲಾ ವಾಹನಗಳ ಸಂಚಾರ ನಿಷೇಧ.

ಅಶೋಕ ಸರ್ಕಲ್‍ನಿಂದ ಎಎ ಸರ್ಕಲ್ ಕಡೆಗೆ, ಸವಾರ್‍ಲೈನ್ ರಸ್ತೆಯಿಂದ ನೆಹರು ರಸ್ತೆ, ಜೈಲ್ ರಸ್ತೆಯಿಂದ ಗೋಪಿ ಸರ್ಕಲ್‍ವರೆಗೆ, ವಾತ್ಸಲ್ಯ ಆಸ್ಪತ್ರೆಯಿಂದ ಬಾಲರಾಜ್‍ಅರಸ್ ರಸ್ತೆ, ಕಾಂಗ್ರೆಸ್ ಪಾರ್ಟಿ ಆಫೀಸ್ ನಿಂದ ಬಾಲರಾಜ್‍ಅರಸ್ ರಸ್ತೆ ಹಾಗೂ ಕೆಇಬಿ ಸರ್ಕಲ್‍ನಿಂದ ಮಹಾವೀರ ಸರ್ಕಲ್ ಗೆ ಸೇರುವ ಎಲ್ಲಾ ರಸ್ತೆಗಳಲ್ಲಿ ಭಾರಿ ವಾಹನಗಳ ನಿಷೇಧ. ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಆಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿರುತ್ತದೆ. 

ಸೌಹಾರ್ದ ವಾತಾವರಣ ನಿರ್ಮಿಸುವಲ್ಲಿ ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News