ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಸೋಮಶೇಖರ್ ತಾಯಿ ನಿಧನ

Update: 2018-11-20 16:55 GMT

ಮಳವಳ್ಳಿ, ನ.20: ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಸೋಮಶೇಖರ್ ಅವರ ತಾಯಿ, ದಿವಂಗತ ಬಸವಯ್ಯನವರ ಪತ್ನಿ ಸಣ್ಣಮ್ಮ(95) ಮಂಗಳವಾರ ನಿಧನರಾಗಿದ್ದಾರೆ.

ತಾಲೂಕಿನ ಹೊಸಹಳ್ಳಿ ಗ್ರಾಮದ ನಿವಾಸದಲ್ಲಿ ವಾಸವಾಗಿದ್ದ ಮೃತರಿಗೆ ಬಿ.ಸೋಮಶೇಖರ್ ಸೇರಿದಂತೆ 4 ಗಂಡು, 2 ಹೆಣ್ಣು ಮ್ಕಕಳು, ಮೊಮ್ಮಕ್ಕಳು ಸೇರಿದಂತೆ ಆಪಾರ ಬಂಧುಬಳಗ ಇದ್ದಾರೆ.

ಮೃತರ ಅಂತ್ಯಕ್ರಿಯೆ ನ.21 ರಂದು 11 ಗಂಟೆಗೆ ಹೊಸಹಳ್ಳಿ ಗ್ರಾಮದ ಅವರ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಸಂತಾಪ: ಸಣ್ಣಮ್ಮನವರ ನಿಧನಕ್ಕೆ ತಾಲೂಕಿನ ಹಲವು ಹಾಲಿ, ಮಾಜಿ ಶಾಸಕರು, ಜಿಪಂ, ತಾಪಂ, ಗ್ರಾಪಂ ಹಾಗೂ ಸಂಘಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News