ಮೈಸೂರು: ಕೆಪಿಎಸ್‍ಸಿ ಮೀಸಲಾತಿ ಆದೇಶ ಹಿಂಪಡೆಯಲು ಒತ್ತಾಯಿಸಿ ಧರಣಿ

Update: 2018-11-20 17:47 GMT

ಮೈಸೂರು,ನ.20: ರಾಜ್ಯ ಸರ್ಕಾರ ಕೆಪಿಎಸ್‍ಸಿ ಯಲ್ಲಿ ಎಸ್ಸಿ, ಎಸ್ಟಿ ಓಬಿಸಿ ಅಭ್ಯರ್ಥಿಗಳು ಆಯಾ ಜಾತಿಯ ಮೀಸಲಾತಿಯಲ್ಲಿಯೇ ಪರಿಗಣಿಸಬೇಕೆಂದು ನೀಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ದಲಿತ ವಿದ್ಯಾರ್ಥಿ ಒಕ್ಕೂಟ, ಎಸ್‍ಎಫ್‍ಐ, ಪ್ರಗತಿಪರ ಚಿಂತಕರ ಸಂಘ, ಬಹುಜನ ವಿದ್ಯಾರ್ಥಿ ಸಂಘಟನೆಗಳು ಜೊತೆಗೂಡಿ ಪ್ರತಿಭಟನೆ ನಡೆಸಿದರು.

ಮಾನಸಗಂಗೋತ್ರಿಯ ಕ್ಯಾಂಪಸ್ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು. ದಲಿತ ಹಿಂದುಳಿದ ರೈತ ವಿರೋಧಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕರ್ನಾಟಕ ರಾಜ್ಯ ಸರ್ಕಾರದ ನೀತಿ, ನಿಯಮಗಳು ಶೋಷಿತ ಸಮುದಾಯಗಳಿಗೆ ಮರಣಶಾಸನಗಳಾಗಿ ಪರಿಣಮಿಸುತ್ತಿರುವುದು ದುರಂತವಾಗಿದೆ. ಕೆಪಿಎಸ್‍ಸಿ ವಿಷಯದಲ್ಲಿ ಎಸ್ಸಿ, ಎಸ್ಟಿ, ಓಬಿಸಿ ಅಭ್ಯರ್ಥಿಗಲು ಆಯಾ ಜಾತಿಯ ಮೀಸಲಾತಿಯಲ್ಲಿಯೇ ಪರಿಗಣಿಸಬೇಕು. ಅವರು ಎಷ್ಟೇ ಉತ್ತಮ ಅಂಗಕಗಳಿಸಿದ್ದರು ಅವರಿಗೆ ಜನರಲ್ ಮೆರಿಟ್‍ನಲ್ಲಿ ಪರಿಗಣಿಸಬಾರದೆಂಬ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಕಾನೂನು ಮಾಡಿಯೂ ಜಾರಿ ಮಾಡಿ ಅನ್ಯಾಯ ಮಾಡುತ್ತಿರುವ ಭಡ್ತಿ ಮೀಸಲಾತಿ ಕಾಯ್ದೆಯಿಂದ ವಂಚನೆಗೊಳಗಾಗಿರುವ ಎಸ್ಸಿ, ಎಸ್ಟಿ, ನೌಕರರ ಹಿತ ಕಾಯಬೇಕು. ಮಣ್ಣಿನ ಮಕ್ಕಳೆಮದು ಹೇಲಿ ಅಧಿಕಾರಕ್ಕೆ ಬಂದು ರೈತ ಸಮುದಾಯದ ವಿರುದ್ಧ ಮಾತನಾಡುವುದನ್ನು ಬಿಟ್ಟು ಕಬ್ಬು ಬೆಳೆಗಾರರಿಗೆ ಬೆಂಬಲ ನೀಡಿ ಬಾಕಿ ಪಾವತಿಸಿ ಅವರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಶೋಧಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಮಹೇಶ್ ಸೋಸ್ಲೆ, ಗೊಪಾಲ್, ವಸಂತ್ ಕಲಾಲ್ ಮೂರ್ತಿ, ಸಂದೀಪ್, ಕಿರಣ್, ರಮೇಶ್, ಚಂದ್ರಪ್ಪ, ಕೈಲಾಶ್, ಶಿವಕುಮಾರ್, ವಸ್‍ಂತ್, ಶಿವಮೂರ್ತಿ, ಶಿವಶಂಕರ್, ನಾಗೇಂದ್ರ, ನವೀನ್ ಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News