ಬೆಳಗಾವಿಯಲ್ಲಿ ಆಯುಷ್ ಉದ್ಯಮಿಗಳ ಕ್ಲಸ್ಟರ್ ಸ್ಥಾಪನೆ

Update: 2018-11-21 16:59 GMT

ಬೆಳಗಾವಿ, ನ.21: ಕೇಂದ್ರ ಸರಕಾರದ ಸೂಕ್ಷ್ಮ, ಸಣ್ಣ ಉದ್ದಿಮೆಗಳ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಲ್ಲಿ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಆಯುಷ್ ಉದ್ದಿಮೆಗಳ ಕ್ಲಸ್ಟರ ಸ್ಥಾಪನೆಗೆ ಯೋಜನೆ ಹೊಂದಲಾಗಿದೆ. ರಾಜ್ಯದ ಆಯುಷ್ ಇಲಾಖೆುಯಿಂದ ಆಯುಷ್ ಉದ್ದಿಮೆಗಳಿಗೆ ಅನುಕೂಲಕ್ಕಾಗಿ ಸಾಮಾನ್ಯ ಸೌಲಭ್ಯ ಕೇಂದ್ರ ಸ್ಥಾಪನೆಗೆ ಸೂಕ್ತ ಸ್ಥಳ ನೀಡಲಾಗುತ್ತದೆ.

ಬೆಳಗಾವಿ ಜಿಲ್ಲೆಯಲ್ಲಿ ಮತ್ತು ಪಕ್ಕದ ಜಿಲ್ಲೆಗಳಲ್ಲಿ 100ಕ್ಕಿಂತ ಅಧಿಕ ಉದ್ದಿಮೆಗಳು ಆಯುಷ್‌ಗೆ ಸಂಬಂಧಿಸಿದ ಹರ್ಬಲ್ ಪ್ರೊಡಕ್ಟ್ಸ್ ಉತ್ಪಾದನೆಯಲ್ಲಿ ತೊಡಗಿರುತ್ತಾರೆ. ಈ ಪೈಕಿ ಕೆಲವರು ಮಾತ್ರ ಪರವಾನಗಿ(ಲೈಸೆನ್ಸ್) ಹೊಂದಿರುತ್ತಾರೆ. ಆಯುಷ್ ಕ್ಷೇತ್ರದಲ್ಲಿ ಉದ್ದಿಮೆ ಸ್ಥಾಪಿಸಲು ಸಾಕಷ್ಟು ಅವಕಾಶಗಳಿವೆ. ಅಲ್ಲದೇ ಈಗಾಗಲೇ ಉದ್ದಿಮೆ ಪ್ರಾರಂಭಿಸಿದವರಿಗೆ ಕೆಲವೊಂದು ಯಂತ್ರೋಪಕರಣಗಳು, ಪರೀಕ್ಷಾ ಉಪಕರಣಗಳು ಮತ್ತು ಹೊಸ ತಾಂತ್ರಿಕತೆ ಉಪಯೋಗದ ಬಗ್ಗೆ ತಿಳುವಳಿಕೆ ಅವಶ್ಯಕವಿದೆ.

ಈ ಹಿನ್ನೆಲೆಯಲ್ಲಿ ನ.27ರಂದು ಮಧ್ಯಾಹ್ನ 12 ಗಂಟೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ರಸ್ತೆಯಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಆಯುಷ್ ಇಲಾಖೆಯ ಸಹಯೋಗದಲ್ಲಿ ಸಭೆ ಕರೆಯಲಾಗಿದೆ. ಆಸಕ್ತರು ದೂರವಾಣಿ ಮುಖಾಂತರ ಅಥವಾ ಪತ್ರ ಮುಖೇನ ತಮ್ಮ ಹೆಸರನ್ನು ನೊಂದಾಯಿಸಬಹುದಾಗಿದೆ. ಕಚೇರಿಯ ದೂರವಾಣಿ ಸಂಖ್ಯೆ-0831-244187, ಜಂಟಿ ನಿರ್ದೇಶಕರು-94480 01887, ಜಂಟಿ ನಿರ್ದೇಶಕರು,(ಸಿಡಾಕ್)-99860 24742, ಸಹಾಯಕ ನಿರ್ದೇಶಕರು- 94816 81745, ಸಹಾಯಕ ನಿರ್ದೇಶಕರು- 94480 29846 ಇವರಿಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News