×
Ad

ಗಬ್ಗಲ್: ಸಂಭ್ರಮದ ಈದ್ ಮಿಲಾದ್ ಆಚರಣೆ

Update: 2018-11-22 19:21 IST

ಗಬ್ಗಲ್, ನ.22: ಇಲ್ಲಿನ ಬದ್ರಿಯಾ ಜುಮಾ ಮಸೀದಿ ವತಿಯಿಂದ ಮೀಲಾದುನ್ನಬಿ ಬುಧವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಹಬ್ಬದ ಅಂಗವಾಗಿ ಮುಸ್ಲಿಮರು ಮುಂಜಾನೆ ಮಸೀದಿ ಆವರಣದಲ್ಲಿ ಗುರುಗಳ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ಕೋರಿದರು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಸೀದಿ ಗುರುಗಳಾದ ವಿ.ಕೆ.ಅಬ್ದುಲ್ ದಾರಿಮಿ ಧಾರ್ಮಿಕ ಪ್ರವಚನ ನೀಡಿ, ಮುಹಮ್ಮದ್ ಫೈಗಂಬರ್ (ಸ) ಅವರ ಜೀವನಾದರ್ಶ ಹಾಗೂ ಸಂದೇಶಗಳನ್ನು ಪಾಲಿಸುವಂತೆ ಕರೆ ನೀಡಿದರು.

ಧಾರ್ಮಿಕ ಕಾರ್ಯಕ್ರಮಗಳ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ವೇಳೆ ಮಸೀದಿ ಅಧ್ಯಕ್ಷ ನಝೀರ್ ಹಾಜಿ, ಕಾರ್ಯದರ್ಶಿ ರಮ್ಲಾನ್, ಎಸ್ಸೆಸ್ಸೆಫ್ ಗಬ್ಗಲ್ ಘಟಕದ ಅಧ್ಯಕ್ಷ ರಝಿನ್, ಮುಸ್ತಫಾ ಹಾಜಿ ತಲಗೂರು, ಮಸೀದಿ ಕೋಶಾಧಿಕಾರಿ ಮೂಸ ಹಾಜಿ, ತಲಗೂರು, ಬಾಳೂರು ಹೋಬಳಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯು.ಡಿ.ಹಕೀಮ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News