ಚಾಮರಾಜನಗರ: ಅಕ್ರಮ ಗ್ಯಾಸ್ ರೀಫಿಲ್ಲಿಂಗ್; ಸಿಲಿಂಡರ್ ಸಮೇತ ಇಬ್ಬರ ಬಂಧನ

Update: 2018-11-22 16:41 GMT

ಚಾಮರಾಜನಗರ,ನ.22: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗೆ ರೀಫಿಲ್ಲಿಂಗ್ ಮಾಡುತ್ತಿದ್ದ ಗ್ಯಾಸ್ ಏಜೆನ್ಸಿ ಮೇಲೆ ದಾಳಿ ನಡೆಸಿ ಸಿಲಿಂಡರ್ ಸಮೇತ ಇಬ್ಬರು ಆರೋಪಿಗಳನ್ನು ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಜಿ.ಪಿ.ಮಲ್ಲಪ್ಪಪುರಂ ನಿವಾಸಿ ಸಿ.ನಾಗರಾಜು, ಬಸ್ತೀಪುರ ನಿವಾಸಿ ಮಹದೇವಪ್ರಭು ಬಂಧಿತ ಆರೋಪಿಗಳು. ಅಕ್ರಮವಾಗಿ ಇಟ್ಟಿದ್ದ 90 ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಟ್ಟಣದಿಂದ ಹರಳೆ ಗ್ರಾಮಕ್ಕೆ ತೆರಳುವ ರಸ್ತೆಯ ಸಮೀಪದಲ್ಲಿ ಸಿದ್ದಾರ್ಥ ಏಜೆನ್ಸಿ ನಡೆಸುತ್ತಿದ್ದ ನಾಗರಾಜು ಎಂಬ ಆರೋಪಿಯು ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳಿಗೆ ರೀಫಿಲ್ಲಿಂಗ್ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಪರಾಧ ವಿಭಾಗದ ನಿರೀಕ್ಷಕ ರವೀಂದ್ರ ತಂಡ ದಾಳಿ ನಡೆಸಿ ಅಕ್ರಮ ಬಳಕೆ ಮಾಡಲು ಇಟ್ಟಿದ್ದ ಐದೂವರೆ ಕೆ.ಜಿ.ಯ ತುಂಬಿರುವ 9, ಖಾಲಿ 14, ನಾಲ್ಕುವರೆ ಕೆ.ಜಿ.ಯ 3 ಖಾಲಿ, 17 ಕೆ.ಜಿ.ಯ 6 ತುಂಬಿರುವುದು, 16 ಖಾಲಿ, 12 ಕೆ.ಜಿ.ಯ 7 ತುಂಬಿರುವುದು, 35 ಖಾಲಿ ಗ್ಯಾಸ್ ಸಿಲಿಂಡರ್ ಗಳು, 2 ರೀಫಿಲ್ಲಿಂಗ್ ಮಿಷಿನ್ ಹಾಗೂ 2 ತೂಕಯಂತ್ರವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಜಿಲ್ಲಾ ಅಪರಾಧ ವಿಭಾಗದ ರವೀಂದ್ರರವರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಲಾಗಿದೆ. 

ದಾಳಿಯಲ್ಲಿ ಜಿಲ್ಲಾ ಅಪರಾಧ ವಿಭಾಗದ ಎಎಸ್‍ಐ ಮಹದೇವಪ್ಪ, ಸಿಬ್ಬಂಧಿಗಳಾದ ಸಿದ್ದಮಲ್ಲಶೆಟ್ಟಿ, ರವಿ, ಸ್ವಾಮಿ, ಮಹೇಶ, ಆಹಾರ ನೀರಿಕ್ಷಕ ನಾಗರಾಜಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News