ಸಾಹಿತ್ಯ ಸಮ್ಮೇಳನ ಪುಸ್ತಕ ಮಳಿಗೆಗಾಗಿ ಅರ್ಜಿ ಆಹ್ವಾನ
ಬೆಂಗಳೂರು, ನ.22: ಧಾರವಾಡದಲ್ಲಿ ಜ.3ರಿಂದ ಮೂರು ದಿನಗಳವರೆಗೆ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಹಾಗೂ ವಾಣಿಜ್ಯ ಮಳಿಗೆ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ.
ಮೂರು ದಿನಕ್ಕೆ ಒಂದು ಪುಸ್ತಕ ಮಳಿಗೆಗೆ 2,500 ಹಾಗೂ ವಾಣಿಜ್ಯ ಮಳಿಗೆಗೆ 3ಸಾವಿರ ಬಾಡಿಗೆ ನಿಗದಿಪಡಿಸಲಾಗಿದ್ದು, ನ.22ರಿಂದ ಡಿ.20ರೊಳಗೆ ನೋಂದಾಯಿಸಿಕೊಳ್ಳಬೇಕು. ಮೊದಲು ಬಂದವರಿಗೆ ಆದ್ಯತೆಯಿದ್ದು, ಪ್ರತಿ ಮಳಿಗೆಗೆ ವಿದ್ಯುತ್ ಸೌಕರ್ಯ, ಕುರ್ಚಿ ಹಾಗೂ ಬೆಂಚುಗಳನ್ನು ಒದಗಿಸಲಾಗುತ್ತದೆ.
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಅಥವಾ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ, ಧಾರವಾಡದ ಹೆಸರಲ್ಲಿ ಡಿಡಿ ತೆಗೆದು ಕಳುಹಿಸಬಹುದು. ಅಥವಾ ನೇರವಾಗಿ ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತಿನಲ್ಲಿ ನೋಂದಾಯಿಸಿಕೊಳ್ಳಬಹುದು.
ಪ್ರತಿನಿಧಿ ನೋಂದಣಿ: ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಇಚ್ಛಿಸುವ ಸಾಹಿತ್ಯ ಅಭಿಮಾನಿಗಳು, ತಮ್ಮ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಥವಾ ಬೆಂಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 250 ರೂ. ಪ್ರತಿನಿಧಿ ಶುಲ್ಕವನ್ನು ಪಾವತಿಸಬೇಕು. ಸಮ್ಮೇಳನದ ಸ್ಥಳದಲ್ಲಿ ಪ್ರತಿನಿಧಿಗಳ ನೋಂದಣಿಗೆ ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 99808 07199 ಅನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.