ಕಾಂಗ್ರೆಸ್ ಗೆದ್ದರೆ 10 ದಿನಗಳಲ್ಲಿ ಕೃಷಿಸಾಲ ಮನ್ನಾ: ರಾಹುಲ್ ಗಾಂಧಿ

Update: 2018-11-23 15:38 GMT

ವಿದಿಶಾ,ನ.23: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಮತ್ತು ನೂತನ ಸರಕಾರವು ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿ ರೈತರ ಕೃಷಿಸಾಲಗಳನ್ನು ಮನ್ನಾ ಮಾಡಲಿದೆ ಎಂದು ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಇಲ್ಲಿ ಪ್ರಕಟಿಸಿದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಕಟುವಾಗಿ ಟೀಕಿಸಿದ ಗಾಂಧಿ,ಅವರು ಶ್ರೀಮಂತ ಉದ್ಯಮಿಗಳ 3.5ಲ.ಕೋ.ರೂಗಳ ಸಾಲವನ್ನು ಮನ್ನಾ ಮಾಡಿದ್ದಾರೆ, ಆದರೆ ರೈತರಿಗಾಗಿ ಏನನ್ನೂ ಮಾಡಲಿಲ್ಲ ಎಂದು ಆರೋಪಿಸಿದರು.

ರೈತರ ಉತ್ಪನ್ನಗಳಿಗೆ ಅತ್ಯುತ್ತಮ ಬೆಲೆ,ಅವರ ಜೀವನಗಳಲ್ಲಿ ಬದಲಾವಣೆಗಳ ಭರವಸೆಯನ್ನು ಮೋದಿ ನೀಡಿದ್ದರು. ಆದರೆ ಅವರು ಏನನ್ನೂ ಮಾಡಲಿಲ್ಲ. ಆ ಕುರಿತು ತಾನು ಪ್ರಶ್ನಿಸಿದರೆ ಮೌನವೇ ಅವರ ಉತ್ತರವಾಗಿದೆ ಎಂದರು.

ಮಧ್ಯಪ್ರದೇಶದಲ್ಲಿ ನ.28ರಂದು ಮತದಾನ ನಡೆಯಲಿದ್ದು,ಡಿ.11ರಂದು ಮತ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News