×
Ad

ಶ್ರೀನಿವಾಸಪುರ: ಫಲಾಹ್ ಇ ಉಮ್ಮತ್ ಫೌಂಡೇಶನ್ ನಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

Update: 2018-11-25 11:41 IST

ಶ್ರೀನಿವಾಸಪುರ, ನ.25: ಪಟ್ಟಣದ ಸರ್ಕಾರಿ ಬಾಲಕರ ಉರ್ದು ಪ್ರಾಥಮಿಕ ಶಾಲೆಯ ಆವರಣದಲ್ಲಿ ಫಲಾಹ್ ಇ ಉಮ್ಮತ್ ಫೌಂಡೇಶನ್ ವತಿಯಿಂದ ಬೆಂಗಳೂರಿನ ಸಪ್ತಗಿರಿ ಮಲ್ಟಿ ಹಾಸ್ಪಿಟಲ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. 

ಶಿಬಿರದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ಆಬೀದ್ ಅನ್ಸಾರಿ ಮತ್ತು ಉಪಾಧ್ಯಕ್ಷ ಟಿ.ಎ.ಕೆ.ಅಯಾಝ್ ಅಹ್ಮದ್, ಶಿಬಿರದಲ್ಲಿ ಹೃದಯ ತಪಾಸಣೆ, ಕಿಡ್ನಿ, ಕ್ಯಾನ್ಸರ್, ಕಣ್ಣಿನ ಪರೀಕ್ಷೆ ಹಾಗೂ ಹಲವಾರು ಕಾಯಿಲೆಗಳ ತಪಾಸಣೆ ನಡೆಸಿ ಔಷಧಿಗಳು ನೀಡಲಾಗುವುದು. ಅವಶ್ಯಕತೆ ಇದ್ದಲ್ಲಿ ಫಲಾಹ್ ಇ ಉಮ್ಮತ್ ಫೌಂಡೇಶನ್‌ ವತಿಯಿಂದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಹಾಯ ನಿಡಲಾಗುತ್ತದೆ ಎಂದರು. 

ಫಲಾಹ್ ಇ ಉಮ್ಮತ್ ಫೌಂಡೇಶನ್‌ ಕಾರ್ಯದರ್ಶಿ ಅಯಾಝ್ ಅಹ್ಮದ್ ಮಾತನಾಡಿ, ಫೌಂಡೇಶನ್‌ ವತಿಯಿಂದ ಇನ್ನೂ ಹೆಚ್ಚು ಜನರಿಗೆ ಅನುಕೂಲ ಆಗುವಂತೆ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸರ್ಕಾರದಿಂದ ಬರುವ ಸವಲತ್ತುಗಳು ಬಗ್ಗೆ ಮಾಹಿತಿ ನೀಡಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಆರೋಗ್ಯ ಶಿಬಿರದಲ್ಲಿ ಸುಮಾರು 250ಕ್ಕೂ ಹೆಚ್ಚು ರೋಗಿಗಳನ್ನು ಬೆಂಗಳೂರಿನ ಸಪ್ತಗಿರಿ ಮಲ್ಟಿ ಹಾಸ್ಪಿಟಲ್ ವೈದ್ಯರು ತಪಾಸಣೆ ನಡೆಸಿದರು.  

ಈ ಸಂದರ್ಭ ಜಾಮಿಯ ಮಸೀದಿಯ ಅಧ್ಯಕ್ಷ ಝಹೀದ್ ಅನ್ಸಾರಿ, ‌ಮಶ್ಕೂರ್ ಮಾವಿನ ಮಂಡಿ ಮಾಲಕ ಮುಸ್ತಫ ಶರೀಫ್, ಫಲಾಹ್ ಉಮ್ಮತ್ ಫೌಂಡೇಶನ್ ಎಂ.ಬಿ.ಟಿ. ಟ್ರೇಡರ್ಸ್ ಮಾಲಕ ಸಾದಿಕ್ ಪಾಷಾ, ನಝೀರ್ ಖಾನ್, ಮುಜೀರ್ ಅಹ್ಮದ್, ರಾಜಾ,  ಶಬ್ಬೀರ್ ಹಾಗೂ ಅಸೋಸಿಯೇಶನ್ ಪದಾಧಿಕಾರಿಗಳು ಹಾಗೂ ಶ್ರೀನಿವಾಸಪುರ ಪಟ್ಟಣದ ನಿವಾಸಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News