×
Ad

ಅಂಬರೀಶ್ ಗೆ ಮಂಡ್ಯದ ಗಂಡು ಬಿರುದುಕೊಟ್ಟಿದ್ದು ನಾನೇ: ಮಾಜಿ ಸಂಸದ ಜಿ.ಮಾದೇಗೌಡ

Update: 2018-11-25 21:23 IST

ಮಂಡ್ಯ, ನ.25: ಅಂಬರೀಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿರುವ ಹಿರಿಯ ಮುತ್ಸದ್ದಿ ಮಾಜಿ ಸಂಸದ ಜಿ.ಮಾದೇಗೌಡರು ಅಂಬರೀಶ್ ಅವರಿಗೆ ಮಂಡ್ಯದ ಗಂಡು ಬಿರುದು ಕೊಟ್ಟಿದ್ದು ನಾನೇ ಎಂದು ಸ್ಮರಿಸಿದ್ದಾರೆ.

ಅಂಬರೀಶ್ ಅವರ ಸಾವು ನನಗೆ ನೋವು ತಂದಿದೆ. ಚಿಕ್ಕವಯಸ್ಸಿನಲ್ಲೇ ಸಾವನ್ನಪ್ಪಿದ್ದಾರೆ. ಮಾತು ಒರಟಾದರೂ ಅಂತರಂಗ ಮಾತ್ರ ಅತ್ಯಂತ ಮೃದು. ಅವನದು ಮಗುವಿನಂತಹ ಮನಸ್ಸು ಎಂದು ಅವರು ಹೇಳಿದರು.

ಸಿನಿಮಾ ನಟನಾಗಿ ಹೆಚ್ಚು ಹೆಸರು ಮಾಡಿದ್ದ, ಜತೆಗೆ ರಾಜಕೀಯವಾಗಿಯೂ ಉತ್ತಮ ಹೆಸರು ಪಡೆದಿದ್ದ. ಆತ ನನ್ನ ಊರಿನವನು ಎಂಬುದು ಹೆಮ್ಮೆಯ ವಿಚಾರ. ಅವರ ತಂದೆಯ ಜತೆಯೊಂದಿಗೂ ನನಗೆ ಒಡನಾಟವಿತ್ತು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News