ಕೊಳ್ಳೇಗಾಲ ಡಿವೈಎಸ್‍ಪಿ ಬಂಧನಕ್ಕೆ ಒತ್ತಾಯ: ಕಂದಾಯ ಇಲಾಖೆ ನೌಕರರಿಂದ ಕಪ್ಪುಪಟ್ಟಿ ಧರಿಸಿ ಧರಣಿ

Update: 2018-11-26 11:32 GMT

ಕೊಳ್ಳೇಗಾಲ,ನ.26: ಗ್ರೇಡ್ 2 ತಹಶೀಲ್ದಾರ್ ಅವರಿಗೆ ಬೆದರಿಕೆ ಹಾಕಿದ್ದ ಡಿವೈಎಸ್‍ಪಿ ಪ್ರಸಾದ್‍ರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಂದಾಯ ಇಲಾಖೆಯ ನೌಕರರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು.

ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿ ಕಂದಾಯ ಇಲಾಖೆಯ ನೌಕರರು ಕೆಲಕಾಲ ಪ್ರತಿಭಟಿಸಿ ಡಿವೈಎಸ್ಪಿ ಪ್ರಸಾದ್‍ರವರನ್ನು ಬಂಧಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್ ರಾಯಪ್ಪ ಹುಣಸಗಿ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ಜಾಗದಲ್ಲಿ ಬೆಳೆದಿದ್ದ ಬೀಟೆ ಮರ ಕಡಿಸಿದ್ದಲ್ಲದೆ ಈ ಸಂಬಂಧ ಸಾರ್ವಜನಿಕ ದೂರಿನ ಹಿನ್ನೆಲೆ ಪರಿಶೀಲನೆಗೆ ತೆರಳಿದ್ದ ಗುಂಡ್ಲುಪೇಟೆ ಗ್ರೇಡ್ 2 ತಹಶೀಲ್ದಾರ್ ಅವರಿಗೆ ಡಿವೈಎಪಿ ತಹಶೀಲ್ದಾರ್ ಬೆದರಿಕೆ ಹಾಕಿರುವುದು ಖಂಡನೀಯ ಎಂದರು. 

ಕಂದಾಯ ಇಲಾಖೆಯ ನೌಕರರು ಹಾಗೂ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳು ಮಾತನಾಡಿದರು. ಡಿವೈಎಸ್ಪಿ ಅವರನ್ನು ಪೊಲೀಸ್ ಇಲಾಖೆ ಬಂಧಿಸಬೇಕು ಎಂದು ಆಗ್ರಹಿಸಿ ನೌಕರರು ಕಪ್ಪುಪಟ್ಟಿ ಧರಿಸಿ ಕೆಲಕಾಲ ಪ್ರತಿಭಟಸಿ, ನೌಕರರ ಪರವಾಗಿ ಗ್ರಾಮಲೆಕ್ಕಿಗ ನಟೇಶ್ ಮನವಿ ಪತ್ರ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News