×
Ad

ಶೋಕಾಚರಣೆ ಕಡೆಗಣಿಸಿ ಹುಟ್ಟುಹಬ್ಬ ಆಚರಿಸಿದ ಬಿಜೆಪಿ ಶಾಸಕ ರವೀಂದ್ರನಾಥ್‍

Update: 2018-11-26 20:47 IST

ದಾವಣಗೆರೆ,ನ.26: ಶಾಸಕ ಎಸ್.ಎ.ರವೀಂದ್ರನಾಥ್‍ಗೆ 73 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಜನ್ಮದಿನ ಆಚರಿಸಿದರು. 

ಬೆಳಗ್ಗೆಯಿಂದಲೇ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಶಿರಮಗೊಂಡನಹಳ್ಳಿಯ ಅವರ ನಿವಾಸಕ್ಕೆ ತೆರಳಿ ಜನ್ಮದಿನದ ಶುಭಾಶಯ ಕೋರಿದರು. ಬಿಜೆಪಿ ರಾಜ್ಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಶಾಸಕ ಎಸ್.ಎ.ರವೀಂದ್ರನಾಥ ಅವರ ಜನ್ಮದಿನಕ್ಕೆ ಶುಭ ಕೋರಿದರು. ಈ ಸಂದರ್ಭ ದೊಡ್ಡ ಕೇಕ್‍ನ್ನು ಕೆ.ಎಸ್. ಈಶ್ವರಪ್ಪ ಸಮ್ಮುಖದಲ್ಲಿ ರವೀಂದ್ರನಾಥ ಕತ್ತರಿಸಿದರು.

ಇದಕ್ಕೂ ಮುನ್ನ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಆಗಮಿಸಿ ರವೀಂದ್ರನಾಥ ಅವರಿಗೆ ಶುಭಾಶಯ ಕೋರಿದರು. ತಮ್ಮ ನಾಯಕನ ಜನ್ಮದಿನಕ್ಕಾಗಿ ಪಕ್ಷದ ಕೆಲವು ಕಾರ್ಯಕರ್ತರು ಮೈಸೂರು ಪೇಟ ಮತ್ತು ಹೂವಿನ ಹಾರ ಹಾಕಿ ಸಂಭ್ರಮಿಸಿದರು. ಕಾರ್ಯಕ್ರಮಕ್ಕೆ ಬಂದವರಿಗೆ ಸಸಿ ವಿತರಿಸಲಾಯಿತು. ಈ ಸಂದರ್ಭ ಶಾಸಕರಾದ ಕೆ. ಕರುಣಾಕರ ರೆಡ್ಡಿ, ಪ್ರೊ. ಲಿಂಗಪ್ಪ ಮತ್ತಿತರರಿದ್ದರು.

ಶೋಕದಲ್ಲೂ ಶಾಸಕರ ಜನ್ಮದಿನಾಚರಣೆ !
ಇತ್ತ ರಾಜ್ಯದಲ್ಲಿ ಹೆಸರಾಂತ ನಟ, ರಾಜಕಾರಣಿ ಅಂಬರೀಷ್ ಹಾಗೂ ಕೆಂದ್ರದ ಮಾಜಿ ಸಚಿವ ಜಾಫರ್ ಶರೀಪ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಾಜ್ಯ ಸರ್ಕಾರ 3 ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ. ಆದರೆ, ಇದ್ಯಾವುದರ ಪರಿವೆಯೇ ಇಲ್ಲದೆ ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ, ಹಾಲಿ ಶಾಸಕ ಎಸ್.ಎ.ರವೀಂದ್ರನಾಥ್ ಅವರು ದೊಡ್ಡ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News