ಹನೂರು: ನಟ ಅಂಬರೀಶ್ ಶ್ರದ್ದಾಂಜಲಿ ಸಭೆ
Update: 2018-11-26 22:55 IST
ಹನೂರು,ನ.26: ಚಿತ್ರ ನಟ ಅಂಬರೀಶ್ ನಿಧನದ ಹಿನ್ನೆಲೆ ಪಟ್ಟಣದ ಒಕ್ಕಲಿಗ ಯುವ ಬಳಗದ ವತಿಯಿಂದ ಹನೂರು ಬಸ್ ನಿಲ್ದಾಣದ ಸಮೀಪ ಶ್ರದ್ದಾಂಜಲಿ ಸಭೆ ಆಯೋಜಿಸಲಾಗಿತ್ತು.
ಅಂಬರೀಶ್ ನಿಧನದಿಂದಾಗಿ ರವಿವಾರದ ಆಚರಿಸಬೇಕಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರವನ್ನು ರದ್ದುಗೊಳಿಸಿದ್ದರು. ಶನಿವಾರ ಮದ್ಯ ರಾತ್ರಿಯೇ ಅಂಬಿಗೆ ಗೀತ ನಮನ ಹಾಗೂ ಹರಿಕಥೆ ನಡೆಸಿ, ಪುಷ್ಟ ನಮನ ಸಲ್ಲಿಸಿ ಕಂಬನಿ ಮಿಡಿದರು
ರವಿವಾರ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಗಿತ್ತು. ಶಾಸಕ ಆರ್.ನರೇಂದ್ರ ಹಾಗೂ ಹಲವು ಮುಖಂಡರು ಅಂಬರೀಶ್ ಹಾಗೂ ಕೇಂದ್ರದ ಮಾಜಿ ಸಚಿವ ಜಾಫರ್ ಶರೀಫ್ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಿದರು.
ರೋಟರಿ ಅಧ್ಯಕ್ಷ ಗಿರೀಶ್, ಒಕ್ಕಲಿಗ ಯುವ ಸಮಿತಿಯ ಅಧ್ಯಕ್ಷ ಸಂತೋಷ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕೆಂಪೆಗೌಡ, ಸೇನೆ ಹನೂರು ತಾಲೂಕು ಅಧ್ಯಕ್ಷ ರಂಗುಗೌಡ ಹಾಗೂ ಇನ್ನಿತರರಿದ್ದರು.