×
Ad

ಅಂಬರೀಶ್ ಅಗಲಿಕೆ ನೋವು ತಂದಿದೆ: ಸಚಿವ ಸಿ.ಪುಟ್ಟರಂಗಶೆಟ್ಟಿ

Update: 2018-11-26 23:22 IST

ಮೈಸೂರು,ನ.26: ಮೇರುನಟ ಅಂಬಿ ನಮ್ಮನ್ನು ಅಗಲಿರುವುದು ನೋವು ತಂದಿದೆ ಎಂದು ಸಚಿವ ಪುಟ್ಟರಂಗಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂಬಿ ಓರ್ವ ಜಾತ್ಯಾತೀತ ರಾಜಕಾರಣಿ. 1998 ರಲ್ಲಿ ಚುನಾವಣಾ ಸ್ಪರ್ಧೆಗೆ ನನಗೆ ಅವಕಾಶ ಕಲ್ಪಿಸಿದ್ದರು. ವಿ.ಸೋಮಣ್ಣ ಟಿಕೆಟ್ ಗೆ ವಿರೋಧಿಸಿದಾಗ ಪುಟ್ಟರಂಗಶೆಟ್ಟಿ ಗೆದ್ದು ಬರಲಿ ಬಿಡು ಅಂದಿದ್ದರು. ನನಗೆ ಟಿಕೆಟ್ ಸಿಗೋದಕ್ಕೆ ಅವರು ಕಾರಣ. ವಸತಿ ಸಚಿವರಾಗಿದ್ದಾಗ ಅಧಿಕ ಮನೆಯನ್ನು ಚಾಮರಾಜನಗರಕ್ಕೆ ಮಂಜೂರು ಮಾಡಿಸಿದರು ಎಂದು ಹೇಳಿದರು.

ಕನ್ನಡ ನಾಡು ಕಂಡ ಅದ್ಭುತ ನಟ ಅಂಬರೀಶ್, ಅವರ ಅಗಲಿಕೆಯಿಂದ ಚಿತ್ರರಂಗವಷ್ಟೇ ಅಲ್ಲದೇ ಎಲ್ಲಾ ರಂಗಗಳು ಬಡವಾಗಿವೆ. ನೇರ ನಡೆ ನುಡಿಗೆ ಹೆಸರಾಗಿದ್ದ ಮೇರು ವ್ಯಕ್ತಿತ್ವ ಅವರದು ಎಂದು ಸ್ಮರಿಸಿದರು.

ಇಂದು ಅವರ ಹೆಂಡತಿ, ಮಗ ಹಾಗೂ ಅಪಾರ ಅಭಿಮಾನಿಗಳನ್ನು ತೊರೆದಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News