×
Ad

ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ: ದಕ್ಷಿಣ ಕನ್ನಡಕ್ಕೆ ಸಮಗ್ರ ಪ್ರಶಸ್ತಿ

Update: 2018-11-27 22:46 IST

ಮೈಸೂರು,ನ.27: ಪದವಿ ಪೂರ್ವ ಶಿಕ್ಷಣ ಇಲಾಖೆ, ವಿಜಯ ವಿಠಲ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಾಲ್ಕು ದಿನ ಆಯೋಜಿಸಿದ್ದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಂಡ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದೆ.

ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಂಡದ ಬಾಲಕ-ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ 90 ಮತ್ತು 82 ಅಂಕಗಳಿಸಿ ಸಮಗ್ರ ಪ್ರಶಸ್ತಿ ಗೆದ್ದಿದೆ.

ವಿಜೇತರ ವಿವರ ಇಂತಿದೆ: ಬಾಲಕರ ವಿಭಾಗದಲ್ಲಿ ಶಾಟ್ ಪುಟ್ ನಲ್ಲಿ ದಕ್ಷಿಣ ಕನ್ನಡದ ಸೌರವ್ ತನ್ವರ್ (ಪ್ರ), ನಾಗೇಂದ್ರ ಅಣ್ಣಪ್ಪ ನಾಯ್ಕ (ದ್ವಿ), ಬೆಂಗಳೂರು ದಕ್ಷಿಣದ ಬಾಲಕುಂಡಿ ಕಾರ್ತಿಕ್ (ತೃ). 1500 ಮೀ ಓಟದಲ್ಲಿ ದಕ್ಷಿಣ ಕನ್ನಡದ ಎಂ.ಸಿ.ಮಿಲನ್ (ಪ್ರ), ಬೆಂಗಳೂರು ದಕ್ಷಿಣದ ಶ್ರೀಶೈಲ (ದ್ವಿ), ಚಿಕ್ಕೋಡಿಯ ಅಸ್ಲಮ್ ಮುಲ್ತಾನಿ (ತೃ). 4*100 ಮೀ ರಿಲೆಯಲ್ಲಿ ಉಡುಪಿ (ಪ್ರ), ದಕ್ಷಿಣ ಕನ್ನಡ (ದ್ವಿ), ಬೆಂಗಳೂರು ದಕ್ಷಿಣ (ತೃ). ಹೈ ಜಂಪ್ ನಲ್ಲಿ ಬೆಂಗಳೂರು ದಕ್ಷಿಣದ ಪಿ.ಯಶಸ್ (ಪ್ರ), ದಕ್ಷಿಣ ಕನ್ನಡದ ಸೃಜನ್ ಜನಾರ್ಧನ್ (ದ್ವಿ), ಉಡುಪಿಯ ಥಾಮಸ್ ರೋಮಾರಿಯೋ ಡಿಸೋಜ (ತೃ). 100 ಮೀ ಓಟದಲ್ಲಿ ಬೆಂಗಳೂರು ದಕ್ಷಿಣದ ಶಶಿಕಾಂತ್ ವಿ.ಅಂಗಡಿ (ಪ್ರ), ಉಡುಪಿಯ ಎಚ್.ಮಣಿಕಂಠ (ದ್ವಿ), ದಕ್ಷಿಣ ಕನ್ನಡದ ಎಲ್.ಕೆ.ಅಭಿಷೇಕ್ (ತೃ). ಓಟದ ನಡಿಗೆಯಲ್ಲಿ ದಕ್ಷಿಣ ಕನ್ನಡದ ಡಿ.ದೇವರಾಜು (ಪ್ರ), ದೀಕ್ಷಿತ್ (ದ್ವಿ), ಧಾರವಾಡದ ಪ್ರವೀಣ್ ಬಸಪ್ಪ (ತೃ). 4*400 ಮೀ ರಿಲೇಯಲ್ಲಿ ದಕ್ಷಿಣ ಕನ್ನಡ (ಪ್ರ), ಉಡುಪಿ (ದ್ವಿ), ಬೆಂಗಳೂರು ದಕ್ಷಿಣ (ತೃ) ಸ್ಥಾನ ಪಡೆದುಕೊಂಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಶಾಟ್ ಪುಟ್ ನಲ್ಲಿ ಚಿಕ್ಕೋಡಿಯ ದಿವ್ಯಾಶ್ರೀ (ಪ್ರ), ದಕ್ಷಿಣ ಕನ್ನಡದ ಅಕ್ಷತಾ ಪ್ರಭುಲಿಂಗ ಬರ್ಲಿ (ದ್ವಿ), ಧಾರವಾಡದ ತರ್ಜಿನ್ ಎಂ.ಸೌದಗರ್ (ತೃ). ಹೈ ಜಂಪ್ ನಲ್ಲಿ ಬೆಂಗಳೂರು ಉತ್ತರದ ಎಚ್.ಜಿ.ಕವನ (ಪ್ರ), ದಕ್ಷಿಣ ಕನ್ನಡದ ಫ್ಲಾರಿಷ್ ವೆಲಿಕ ಮಾಂಟೆರೊ (ದ್ವಿ), ಪಲ್ಲವಿ ಪಾಟೀಲ್ (ತೃ). 4*100 ಮೀ ರಿಲೇಯಲ್ಲಿ ಮೈಸೂರು (ಪ್ರ), ಉಡುಪಿ (ದ್ವಿ), ದಕ್ಷಿಣ ಕನ್ನಡ (ತೃ). 100 ಮೀ ಓಟದಲ್ಲಿ ದಕ್ಷಿಣ ಕನ್ನಡದ ಜೋಶ್ನ ಸಿಮೋವ್ ಮಂಗಳವಡಕರ್ (ಪ್ರ), ವರ್ಷ (ದ್ವಿ), ಮೈಸೂರಿನ ಆರ್.ಹರ್ಷಿಣಿ (ತೃ). ಓಟದ ನಡಿಗೆಯಲ್ಲಿ ದಕ್ಷಿಣ ಕನ್ನಡದ ಜಿ.ಧನುಷ ಶೆಟ್ಟಿ (ಪ್ರ), ಚಿಕ್ಕೋಡಿಯ ಚೈತ್ರ ಐ.ಕಲ್ಯಾಣಿ (ದ್ವಿ), ಉಡುಪಿಯ ರಕ್ಷ ಅಂಚನ್ (ತೃ) ಬಹುಮಾನ ಪಡೆದುಕೊಂಡಿದ್ದಾರೆ.

ಇದರ ಜೊತೆಗೆ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡದ ಜೋಶ್ನ ಸಿಮೋವ್ ಮಂಗಳವಡಕರ್, ಬೆಂಗಳೂರು ಉತ್ತರದ ಅರ್ಪಿತಾ ಮತ್ತು ಬೆಂಗಳೂರು ದಕ್ಷಿಣದ ದೀಪಾಂಕ ಸಿಂಗ್ ಹಾಗೂ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣದ ನವೀನ್, ದಕ್ಷಿಣ ಕನ್ನಡದ ಮಿಲನ್ ಅವರು ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಬಹುಮಾನ ವಿತರಿಸಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ದಯಾನಂದ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ರಾಮು, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಜಿಲ್ಲಾ ಪಿಯು ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್.ಎಂ.ತುಳಸಿದಾಸ್, ಕ್ರೀಡಾ ಸಮಿತಿ ಸಂಚಾಲಕ ನಾಗಮಲ್ಲೇಶ್, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜು, ವಿಜಯ ವಿಠಲ ಪಿಯು ಕಾಲೇಜು ಪ್ರಾಚಾರ್ಯ ಎಚ್.ಸತ್ಯಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News