ರಾಜ್ಯಮಟ್ಟದ ವಿಜ್ಞಾನ ಸಮಾವೇಶಕ್ಕೆ ಬಾಲವಿಜ್ಞಾನಿಯಾಗಿ ಸಾಗರ್ ಆಯ್ಕೆ
Update: 2018-11-27 23:35 IST
ಚಿಕ್ಕಮಗಳೂರು, ನ.27: ಇತ್ತೀಚೆಗೆ ನಗರದ ಭುವನೇಂದ್ರ ವಿದ್ಯಾಸಂಸ್ಥೆಯಲ್ಲಿ ನಡೆದ 26ನೇ ಅಖಿಲ ಕರ್ನಾಟಕ ಜಿಲ್ಲಾಮಟ್ಟದ ವಿಜ್ಞಾನ ಸಮಾವೇಶದಲ್ಲಿ ದಂಟರಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಡಿ.ಸಿ.ಸಾಗರ್ ಪ್ರಥಮಸ್ಥಾನ ಗಳಿಸಿ ಬಾಲ ವಿಜ್ಞಾನಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಿದ್ಯಾರ್ಥಿ ಸಾಗರ್ 'ರಾಸುಗಳ ಸಂಖ್ಯೆ ಕ್ಷೀಣಿಸುತ್ತಿರುವ ಕಾರಣ' ಎಂಬ ವಿಷಯದಲ್ಲಿ ವಿಜ್ಞಾನ ಯೋಜನೆ ಮಂಡಿಸಿದ್ದು, ಈತನೊಂದಿಗೆ ಜಿಲ್ಲೆಯ ಹಲವಾರು ಖಾಸಗಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಈತ ಮಂಡಿಸಿದ ವಿಷಯ ಪ್ರಥಮ ಸ್ಥಾನ ಗಳಿಸಿದ್ದು, ಈತನ ಈ ಸಾಧನೆಗೆ ಶಾಲಾ ಶಿಕ್ಷಕಿ ಸ್ಮಿತಾ, ಸವಿತಾ ಲೋಬೋರವರು ಮಾರ್ಗದರ್ಶನ ನೀಡಿದ್ದರು. ಬಾಲ ವಿಜ್ಞಾನಿಯಾಗಿ ಆಯ್ಕೆಯಾಗಿರುವ ಈತನ ಸಾಧನೆಗೆ ಶಾಲೆಯ ಶಿಕ್ಷಕ ವೃಂದ ಅಭಿನಂದಿಸಿದೆ.