ಮುಂಡಗೋಡ: ಬಾಲಕಿಗೆ ಅಪ್ರಾಪ್ತನಿಂದ ಲೈಂಗಿಕ ಕಿರುಕುಳ ಆರೋಪ; ದೂರು ದಾಖಲು

Update: 2018-11-27 18:25 GMT

ಮುಂಡಗೋಡ,ನ.27: ತಾಲೂಕಿನ ಓಣಿಕೇರಿ ಗ್ರಾಮದ 16 ವಯಸ್ಸಿನ ಬಾಲಕ, ಸುಮಾರು 4 ವರ್ಷ 6 ತಿಂಗಳ ಬಾಲಕಿಗೆ ಲೈಗಿಂಕ ಕಿರುಕುಳ ನೀಡಿದ್ದಾನೆಂದು ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಓಣಿಕೇರಿ ಗ್ರಾಮದ ಅಪ್ರಾಪ್ತನು ರವಿವಾರ ಬಾಲಕಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ತನ್ನ ಮನೆಗೆ ಕರೆದುಕೊಂಡು ಬಾಗಿಲು ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಸಂತ್ರಸ್ತೆಯ ತಂದೆ ಸೋಮವಾರ ರಾತ್ರಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News