×
Ad

ಅಂಕಣಕಾರ ರಂಗನಾಥರಾವ್, ನಿವೃತ್ತ ನ್ಯಾ. ಎಚ್.ಎಲ್.ದತ್ತು ಸೇರಿ 63 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Update: 2018-11-28 19:22 IST

ಬೆಂಗಳೂರು, ನ.28: ಸಾಹಿತಿ ಹಸನ್ ನಯೀಂ ಸುರಕೋಡ್, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ, ಹಿರಿಯ ಪತ್ರಕರ್ತ, ವಾರ್ತಾಭಾರತಿ ಅಂಕಣಕಾರ ಜಿ.ಎನ್.ರಂಗನಾಥ್‌ ರಾವ್ ಹಾಗೂ ನಿವೃತ್ತ ನ್ಯಾಯಮೂರ್ತಿ ಎಚ್.ಎಲ್.ದತ್ತು ಸೇರಿದಂತೆ 63 ಸಾಧಕರಿಗೆ 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಪ್ರಕಟಿಸಿದೆ.

ಪ್ರಶಸ್ತಿಯು 1 ಲಕ್ಷ ರೂ.ನಗದು ಹಾಗೂ 25 ಗ್ರಾಂ ಚಿನ್ನವನ್ನು ಒಳಗೊಂಡಿದೆ. 

ಸಾಹಿತ್ಯ: ಎಂ.ಎಸ್.ಪ್ರಭಾಕರ(ಕಾಮರೂಪಿ), ಹಸನ್ ನಯೀಂ ಸುರಕೋಡ್, ಚ.ಸರ್ವಮಂಗಳ ಹಾಗೂ ಚಂದ್ರಶೇಖರ ತಾಳ್ಯ.

ರಂಗಭೂಮಿ: ಎಸ್.ಎನ್.ರಂಗಸ್ವಾಮಿ, ಪುಟ್ಟಸ್ವಾಮಿ ಹಾಗೂ ಪಂಪಣ್ಣ ಕೋಗಳಿ.

ಸಂಗೀತ: ಅಣ್ಣು ದೇವಾಡಿಗ.

ನೃತ್ಯ: ಎಂ.ಆರ್.ಕೃಷ್ಣಮೂರ್ತಿ.

ಜಾನಪದ: ಗುರುವ ಕೊರಗ, ಗಂಗಹುಚ್ಚಮ್ಮ, ಚನ್ನಮಲ್ಲೇಗೌಡ, ಶರಣಪ್ಪ ಬೂತೇರ, ಶಂಕ್ರಮ್ಮ ಮಹಾದೇವಪ್ಪ, ಬಸವರಾಜ ಅಲಗೂಡ ಹಾಗೂ ಚೂಡಾಮಣಿ ರಾಮಚಂದ್ರ.

ಶಿಲ್ಪಕಲೆ: ಯಮನಪ್ಪ ಚಿತ್ರಗಾರ, ಬಸಣ್ಣ ಕಾಳಪ್ಪ ಕಂಚಗಾರ.

ಚಿತ್ರಕಲೆ: ಬಸವರಾಜ ರೇವಣ್ಣಸಿದ್ದಪ್ಪ ಉಪ್ಪಿನ.

ಕ್ರೀಡೆ: ಕೆನೆತ್‌ಪೊವೆಲ್, ವಿನಯ ವಿ.ಎಸ್., ಚೇತನ್ ಆರ್.

ಯಕ್ಷಗಾನ: ಹಿರಿಯಡ್ಕ ಗೋಪಾಲರಾವ್, ಸೀತಾರಾಮ ಕುಮಾರ ಕಟೀಲು.

ಬಯಲಾಟ: ಯಲ್ಲವ್ವಾ ರೊಡ್ಡಪ್ಪನವರ, ಭೀಮರಾಯ ಬೋರಗಿ.

ಚಲನಚಿತ್ರ: ಭಾರ್ಗವ, ಜೈಜಗದೀಶ್, ರಾಜನ್ ಹಾಗೂ ದತ್ತುರಾಜ್.

ಶಿಕ್ಷಣ: ಗೀತಾ ರಾಮಾನುಜಂ, ಎ.ವಿ.ಎಸ್.ಮೂರ್ತಿ, ಡಾ.ಕೆ.ಪಿ.ಗೋಪಾಲಕೃಷ್ಣ ಹಾಗೂ ಶಿವಾನಂದ ಕೌಜಲಗಿ.

ಇಂಜಿನಿಯರಿಂಗ್: ಪ್ರೊ.ಸಿ.ಇ.ಜಿ.ಜಸ್ಟೋ(ವಿಜ್ಞಾನ-ತಂತ್ರಜ್ಞಾನ).

ಸಂಕೀರ್ಣ: ಆರ್.ಎಸ್.ರಾಜಾರಾಂ, ಮೇಜರ್ ಪ್ರದೀಪ್ ಆರ್ಯ, ಸಿ.ಕೆ.ಜೋರಾಪುರ, ನರಸಿಂಹಯ್ಯ, ಡಿ.ಸುರೇಂದ್ರಕುಮಾರ್, ಶಾಂತಪ್ಪನವರ್ ಪಿ.ಬಿ., ನಮಶಿವಾಯಂ ರೇಗುರಾಜ್, ಪಿ.ರಾಮದಾಸ್, ಎಂ.ಜೆ.ಬ್ರಹ್ಮಯ್ಯ.

ಪತ್ರಿಕೋದ್ಯಮ: ಜಿ.ಎನ್.ರಂಗನಾಥರಾವ್, ಬಸವರಾಜಸ್ವಾಮಿ ಹಾಗೂ ಅಮ್ಮೆಂಬಳ ಆನಂದ.

ಸಹಕಾರ: ಸಿ.ರಾಮು.

ಸಮಾಜಸೇವೆ: ಆನಂದ್ ಸಿ.ಕುಂದರ್, ರಾಚಪ್ಪ ಹಡಪದ, ಕೃಷ್ಣಕುಮಾರ ಪೂಂಜ, ಮಾರ್ಗರೇಟ್ ಆಳ್ವ.

ಕೃಷಿ: ಮಹಾದೇವಿ, ಅಣ್ಣಾರಾವ ವಣದೆ, ಮೂಕಪ್ಪ ಪೂಜಾರ್.

ಪರಿಸರ: ಕಲ್ಮನೆ ಕಾಮೇಗೌಡ.

ಸಂಘ-ಸಂಸ್ಥೆ: ರಂಗದೊರೈ ಸ್ಮಾರಕ ಆಸ್ಪತ್ರೆ.

ವೈದ್ಯಕೀಯ: ಡಾ.ನಾಡಗೌಡ ಜೆ.ವಿ., ಡಾ.ಸೀತಾರಾಮಭಟ್, ಪಿ.ಮೋಹನರಾವ್ ಹಾಗೂ ಡಾ.ಎಂ.ಜಿ.ಗೋಪಾಲ್.

ನ್ಯಾಯಾಂಗ: ನ್ಯಾಯಮೂರ್ತಿ ಎಚ್.ಎಲ್.ದತ್ತು.

ಹೊರನಾಡು: ಡಾ.ಎ.ಎ.ಶೆಟ್ಟಿ

ಸ್ವಾತಂತ್ರ ಹೋರಾಟಗಾರರು: ಬಸವರಾಜ ಬಿಸರಳ್ಳಿಯವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ನ.29ರಂದು ಪ್ರಶಸ್ತಿ ಪ್ರದಾನ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಗರದ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನ.29ರಂದು ಸಂಜೆ 6.30ಕ್ಕೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಅದಕ್ಕೂ ಮುನ್ನ ಸಂಜೆ 5ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News