×
Ad

2018ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ: 800 ಚಿತ್ರಗಳಲ್ಲಿ ನಟಿಸಿರುವ ಜೈಜಗದೀಶ್

Update: 2018-11-28 21:01 IST

ಮಡಿಕೇರಿ, ನ.28: ಖ್ಯಾತ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಶಿಷ್ಯ, ಚಿತ್ರ ನಟ, ನಿರ್ಮಾಪಕ, ನಿರ್ದೇಶಕ ಜೈಜಗದೀಶ್ ಅವರಿಗೆ 2018ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

ಸುಮಾರು 800 ಚಿತ್ರಗಳಲ್ಲಿ ನಟಿಸಿರುವ ಹಿರಿಯ ನಟ ಜೈಜಗದೀಶ್, 1973 ರಲ್ಲಿ ಫಲಿತಾಂಶ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಬೆಳೆದ ಅವರು, ಚಿತ್ರ ಜೀವನದಲ್ಲಿ ಒಂದು ರಾಷ್ಟ್ರ ಪ್ರಶಸ್ತಿ, ಐದು ರಾಜ್ಯ ಪ್ರಶಸ್ತಿ ಹಾಗೂ ಒಂದು ಫಿಲಂ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದೀಗ ರಾಜ್ಯ ಸರಕಾರ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಮತ್ತೊಂದು ಗರಿ ಜೈಜಗದೀಶ್ ಅವರ ಮುಡಿಗೇರಿದೆ.

1956 ರಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಾರೆಕೊಪ್ಪ ಗ್ರಾಮದಲ್ಲಿ ಪೂವಯ್ಯ ಹಾಗೂ ಗೌರಮ್ಮ ದಂಪತಿಗಳ ಪುತ್ರನಾಗಿ ಜೈಜಗದೀಶ್ ಜನಿಸಿದರು. ಜೈಜಗದೀಶ್ ರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಕೂಡ ಚಿತ್ರ ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ ಸದಾ ಸಿನಿಮಾ ಚಟುವಟಿಕೆಯಲ್ಲಿದ್ದಾರೆ. ದಂಪತಿಗಳು ನಾಲ್ವರು ಪುತ್ರಿಯರನ್ನು ಹೊಂದಿದ್ದಾರೆ.

ನಾಲ್ವರೂ ಪುತ್ರಿಯರು ಅಭಿನಯಿಸಿರುವ ‘ತಾಣ’ ಚಿತ್ರವನ್ನು ಇತ್ತೀಚೆಗೆ ಜೈಜಗದೀಶ್ ನಿರ್ಮಿಸಿದ್ದು, ಸಧ್ಯದಲ್ಲಿಯೇ ತೆರೆ ಕಾಣಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News