ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‍: ಮಂಡ್ಯ ಕರಾಟೆ ತಂಡಕ್ಕೆ ಹಲವು ಪ್ರಶಸ್ತಿ

Update: 2018-12-02 17:31 GMT

ಮಂಡ್ಯ, ಡಿ.2: ಇತ್ತೀಚೆಗೆ ತುಮಕೂರಿನ ಎಸ್‍ಎಸ್‍ಐಟಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಮಂಡ್ಯದ ವಿಷ್ಣು ಲಯನ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ತರಬೇತಿ ಸ್ಕೂಲ್‍ನ ಹಾಗೂ ನಗರದ ವಿವಿಧ ಶಾಲೆಯ ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ನಗರದ ಬಾಲಭವನದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕರಾಟೆ ತರಬೇತುದಾರ ಲೋಕೇಶ್ ಮೊದಲಿಯಾರ್, ಕಟಾ-ಕುಮುತೆ (ಫೈಟ್) ವಿಭಾಗದ ಸಬ್‍ ಜೂನಿಯರ್, ಜೂನಿಯರ್, ಸೀನಿಯರ್ ವಿಭಾಗಗಳಲ್ಲಿ ಮತ್ತು ವಯಸ್ಸಿನ ಆಧಾರದ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ಟೀಮ್ ಚಾಂಪಿಯನ್‍ ಶಿಪ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡು, ಪಾಂಡಿಚೇರಿ, ಗೋವಾ, ಕೇರಳ ಇತರ ರಾಜ್ಯಗಳ ಸುಮಾರು 650 ಕರಾಟೆ ಪಟುಗಳು ಭಾಗವಹಿಸಿದ್ದರು. ಇದರಲ್ಲಿ ಮಂಡ್ಯದಿಂದ ಸುಮಾರು 50 ಮಕ್ಕಳು ಭಾಗವಹಿಸಿ ಎಲ್ಲಾ ವಿಭಾಗಗಳಲ್ಲೂ ಅತಿ ಹೆಚ್ಚು ಬಹುಮಾನ ಪಡೆಯುವುದರೊಂದಿಗೆ ಚಾಂಪಿಯನ್‍ಶಿಪ್–2018 ಪಟ್ಟವನ್ನು ನಮ್ಮ ಜಿಲ್ಲೆಗೆ ತರುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ ಎಂದು ಅವರು ಶ್ಲಾಘಿಸಿದರು.

ಸ್ಪರ್ಧೆಯಲ್ಲಿ ನಗರದ ಸದ್ವಿದ್ಯಾ ಶಾಲೆ, ಕಾನ್‍ಕಾರ್ಡ್, ಉನ್ನತಿ, ಇಂಡಿಯನ್, ಪಬ್ಲಿಕ್ ಶಾಲೆಯ ಹಾಗೂ ವಿಎಲ್‍ಎಂಎಎ ಕರಾಟೆ ತರಬೇತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಕಟಾ-ಕುಮುತೆ (ಫೈಟ್) 12 ಪ್ರಥಮ ಬಹುಮಾನ, 18 ದ್ವೀತಿಯ ಬಹುಮಾನ ಹಾಗೂ 16 ತೃತೀಯ ಬಹುಮಾನ ಗಳಿಸಿದ್ದಾರೆ.

ಕರಾಟೆ ಸಂಸ್ಥೆಯ ಕಾರ್ಯದರ್ಶಿ ಎಸ್.ಭೂಮಿಕಾ, ತರಬೇತುದಾರರಾದ ಎಂ.ಸಾಗರ್, ಶರತ್, ಹೀಬಾ ಅಮೀನ್, ಪ್ರತಾಪ್ ಹಾಗೂ ಪೋಷಕರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News