ಹನೂರು: ಮಾರ್ಟಳ್ಳಿ ಗ್ರಾಮ ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಹನೂರು,ನ.3: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂ. ನಲ್ಲಿ ತೆರವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಸಾವಿತ್ರಿ ಹಾಗು ಸಾವಿತ್ರಿ ಬಾಯಿ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಸಾವಿತ್ರಿ ಬಾಯಿ 23 ಮತಗಳನ್ನು ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾದರು. ಜೆ.ಡಿ.ಎಸ್ ಬೆಂಬಲಿತ ಸಾವಿತ್ರಿಯವರು 15 ಮತಗಳನ್ನು ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ಪುಷ್ಪಮೇರಿ ಮತ್ತು ಇಜ್ಞಾಸಿ ಮುತ್ತು ಸ್ಪರ್ಧಿಸಿ, ಜೆಡಿಎಸ್ ಬೆಂಬಲಿತ ಪುಷ್ಪಮೇರಿ 20 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಇಜ್ಞಾಸಿ ಮುತ್ತು 18 ಮತಗಳನ್ನು ಗಳಿಸಿದರು.
ಚುನಾವಣಾ ಅಧಿಕಾರಿಯಾಗಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್.ವಿ ಪ್ರಶಾಂತ್ ಭಾಗವಹಿಸಿದ್ದರು. ರಾಮಾಪುರ ಪೊಲೀಸ್ ಇನ್ಸ್‍ಪೆಕ್ಟರ್ ಮನೋಜ್ ಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂ. ಉಪಾಧ್ಯಕ್ಷ ಶಿವಮೂರ್ತಿ, ಸದಸ್ಯ ಬಾಬು, ಜೆಡಿಎಸ್ ಮುಖಂಡ ಮಂಜೇಶ್, ಸಿಂಗನಲ್ಲೂರು ರಾಜು, ದಿನ್ನಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಮಹದೇವ್, ಪಾಳ್ಯ ಸಿದ್ದಪ್ಪಾಜಿ, ಜೆಡಿಎಸ್ ಮುಖಂಡರಾದ ರಾಜೇಶ್, ಮುರುಗೇಶ್ ಮುಂತಾದವರು ಭಾಗವಹಿಸಿದ್ದರು.