×
Ad

ಕೊಲ್ಲಹಳ್ಳಿ: ಮಸೀದಿ ಶಿಲಾನ್ಯಾಸ, ಶರೀಅತ್ ಸಮ್ಮೇಳನ ಪ್ರಚಾರ

Update: 2018-12-03 23:46 IST

ಹಾಸನ, ಡಿ. 3: ಜಿಲ್ಲೆಯ ಸಕಲೇಶಪುರಕ್ಕೆ ಸಮೀಪದ  ಕೊಲ್ಲಹಳ್ಳಿ ಎಂಬಲ್ಲಿ ಪುನರ್ನಿರ್ಮಾಣವಾಗಲಿರುವ ಬದ್ರಿಯಾ ಮಾಸೀದಿಗೆ ಶಿಲಾನ್ಯಾಸವನ್ನು ಸಮಸ್ತದ ಅಧ್ಯಕ್ಷ ಶೈಖುನಾ ಸೈಯ್ಯಿದುಲ್ ಉಲಮಾ ಜಿಪ್ರಿ ತಂಙಳ್ ನೆರವೇರಿಸಿದರು.

ನಂತರ ಮಾತನಾಡಿದ ಅವರು ಮಾತನಾಡಿ ಮಸೀದಿ ಒಂದು ಊರಲ್ಲಿ ನಿರ್ಮಾಣ ಗೊಂಡರೆ ಆ ಊರಿನ ಮುಸಲ್ಮಾನರು ಮಾತ್ರವಲ್ಲ ಇಡೀ ಮಾನವ ಕುಲ ಸಮೇತ ಪ್ರಾಣಿ ಪಕ್ಷಿಗಳು, ಮರಮುಟ್ಟುಗಳು, ನೆಲ ಜಲ ಕೂಡಾ ಸಂತುಷ್ಟ ಗೊಳ್ಳುತ್ತವೆ ಎಂದರು.

ಮೌಲಾನಾ ಯಸ್ ಬಿ ದಾರಿಮಿ, ಮೌಲಾನಾ ಯು ಕೆ ದಾರಿಮಿ, ಮೌಲಾನಾ ಹುಸೈನ್ ದಾರಿಮಿ , ಎಸ್ ಕೆ ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಿ 9 ರಂದು ಮಂಗಳೂರಿನ ನೆಹರು ಮೈದಾನಿನಲ್ಲಿ ಸಮಸ್ತದ ವತಿಯಿಂದ ನಡೆಸಲ್ಪಡುವ ಶರೀಹತ್ ಕಾರ್ಯಕ್ರಮದ ಜಿಲ್ಲಾ ಪ್ರಚಾರದ ಉದ್ಘಾಟನೆಯನ್ನು ಪೋಸ್ಟರ್ ಪ್ರದರ್ಶಿಸಿ ಪಾಣಕ್ಕಾಡ್ ಶಹೀರಲಿ ತಂಙಳ್ ಮತ್ತು ಮೊಗ್ರಾಲ್ ತಂಙಲ್ ನಿರ್ವಹಿಸಿದರು. ಮಾರ್ನಹಳ್ಳಿ ತಂಙಳ್, ಕುಂಬೋಲ್ ಅಲಿ ತಂಙಳ್, ಕೊಡುಗೈದಾನಿ ಜಿಯಾವುಲ್ಲಾ ಶರೀಫ್, ಹಂಝ ಹಾಜಿ ಚಕಮಕಿ, ಮೂಸಾ ದಾರಿಮಿ ಕಕ್ಕಿಂಜೆ ಇಕ್ಬಾಲ್ ನೆಲ್ಯಹುದಿಕೇರಿ, ಶರೀಹತ್ ಸ್ವಾಗತ ಸಮಿತಿಯ ಕೊಶಾಧಿಕಾರಿ ರಝಾಕ್ ಹಾಜಿ ಬಿ ಸಿ ರೋಡು, ಅಬ್ದಲ್ ರಶೀದ್ ಹಾಜಿ ಪರ್ಲಡ್ಕ,ರಫೀಕ್ ಹಾಜಿ ಕೊಡಾಜೆ ಇಸ್ಮಾಯಿಲ್ ಯಮಾನಿ, ಇಬ್ರಾಹೀಂ ಮೂಡಿಗೆರೆ, ಇಬ್ರಾಹೀಂ ಸಕಲೇಶಪುರ, ಮೊಯಿದು ಪೈಝಿ ಮಡಿಕೇರಿ, ಯಾಕೂಬ್ ಬಜಗುಂಡಿ, ಹಸೈನಾರ್ ಪೈಝಿ ಆನೆ ಮಹಲ್, ಬದ್ರುದ್ದೀನ್ ದಾರಿಮಿ, ಶಾಸಕ ಕುಮಾರಸ್ವಾಮಿ, ಸಮಸ್ತದ ಉಲಮಾ ಮುಖಂಡರು, ರಾಜಕೀಯ ನಾಯಕರು ಉಪಸ್ಥಿತರಿದ್ದರು.

ಸಲೀಂ ಕೊಳ್ಳಹಳ್ಳಿ ಸ್ವಾಗತಿಸಿ, ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News