×
Ad

ಬಿಜೆಪಿಯವರ ನೂರಾರು ಕೋಟಿ ರೂ.ಗಳ ಆಮಿಷಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ: ಸಚಿವ ಡಿಕೆಶಿ

Update: 2018-12-04 20:49 IST

ಬೆಂಗಳೂರು, ಡಿ. 4: ‘ಬಿಜೆಪಿ ಮುಖಂಡರು ಇನ್ನೂ ನೂರು ಜನರನ್ನು ಭೇಟಿ ಮಾಡಲಿ, ನಮ್ಮ ಶಾಸಕರಿಗೆ ನೂರಾರು ಕೋಟಿ ರೂ.ಗಳ ಆಮಿಷವೊಡ್ಡಿದರೂ, ಅದಕ್ಕೆಲ್ಲ ನಾವೇನೂ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಂಗಳವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಆಪರೇಷನ್ ಕಮಲ’ ವಿಚಾರ ಸಂಬಂಧ ಸುಜೀತ್ ಎಂಬವರ ಆಡಿಯೋ ಮಾಧ್ಯಮಗಳಲ್ಲಿ ಬಂದಿದೆ. ಅವರು ನನ್ನ ಪಿಎ ಏನೂ ಅಲ್ಲ. ಅವರೇನಿದ್ದರೂ ಶ್ರೀರಾಮುಲು ಅಣ್ಣನವರ ಪಿಎ ಎಂದು ಟೀಕಿಸಿದರು.

ಸುರ್ಜಿತ್ ತಮ್ಮ ಪಿಎ ಅಲ್ಲದಿದ್ದರೆ ಅವರನ್ನು ಶ್ರೀರಾಮುಲು ಅಣ್ಣನವರು ಏಕೆ ಹಗಲು-ರಾತ್ರಿ ಹಿಂದೆ ಇಟ್ಟುಕೊಂಡು ಓಡಾಡುತಿದ್ದರು. ಶಾಸಕ ಅಶ್ವಥ್ ನಾರಾಯಣ ಮೂರು ದಿನಗಳ ಹಿಂದೆ ಯಾರನ್ನು ಭೇಟಿ ಮಾಡಿದ್ದರು. ಗಾಲಿ ಜನಾರ್ದನ ರೆಡ್ಡಿ ಜಿಂದಾಲ್ ಆಸ್ಪತ್ರೆಗೇಕೆ ಹೋಗಿದ್ದರು ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.

ಕೆಲ ಬಿಜೆಪಿ ಮುಖಂಡರಿಗೆ ಈ ಬಗ್ಗೆ ಯಾವುದೇ ವಿಚಾರ ಗೊತ್ತಿಲ್ಲ. ಜಗದೀಶ್ ಶೆಟ್ಟರ್ ಮತ್ತು ಸಿ.ಟಿ.ರವಿಯವರಿಗೆ ಸಂಶಯವಿದ್ದರೆ ದೂರು ಕೊಟ್ಟು ತನಿಖೆಗೆ ಆಗ್ರಹಿಸಲಿ. ಆದರೆ, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗುವುದಿಲ್ಲವೇ? ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News