ಮಾಡ್ರಿಕ್‌ಗೆ ಒಲಿದ ಬ್ಯಾಲನ್ ಡಿ’ಓರ್ ಪ್ರಶಸ್ತಿ

Update: 2018-12-04 18:25 GMT

ಪ್ಯಾರಿಸ್: ರಿಯಲ್ ಮ್ಯಾಡ್ರಿಡ್ ಹಾಗೂ ಕ್ರೊಯೇ ಶಿಯದ ಮಿಡ್ ಫೀಲ್ಡರ್ ಲುಕಾ ಮಾಡ್ರಿಕ್ 2018ರ ಸಾಲಿನ ಬ್ಯಾಲನ್ ಡಿ’ಓರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೊದಲ ಬಾರಿ ಈ ಪ್ರತಿಷಿತ ಪ್ರಶಸ್ತಿಗೆ ಪಾತ್ರರಾಗಿರುವ ಮಾಡ್ರಿಕ್ ಅವರು ಲಿಯೊನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊರ ಪ್ರಾಬಲ್ಯಕ್ಕೆ ಅಂತ್ಯ ಹಾಡಿದರು.

ನಾರ್ವೆಯ ಹೆಗರ್‌ಬರ್ಗ್‌ಗೆ ಮಹಿಳಾ ಬ್ಯಾಲನ್ ಡಿ’ಓರ್: ಫ್ರಾನ್ಸ್ ಫುಟ್ಬಾಲ್ ಮ್ಯಾಗಝಿನ್ 1956ರಿಂದ ಬ್ಯಾಲನ್ ಡಿ’ಓರ್ ಪ್ರಶಸ್ತಿ ನೀಡುತ್ತಿದೆ. ಇದೇ ಮೊದಲ ಬಾರಿ ಮಹಿಳಾ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ. ನಾರ್ವೆಯ ಫಾರ್ವರ್ಡ್ ಆಟಗಾರ್ತಿ ಅಡಾ ಹೆಗರ್‌ಬರ್ಗ್ ಮೊದಲ ಆವೃತ್ತಿಯ ಮಹಿಳಾ ಬ್ಯಾಲನ್ ಡಿ’ಓರ್ ಪ್ರಶಸ್ತಿಗೆ ಆಯ್ಕೆಯಾದರು

ಬಾಪೆಗೆ ಶ್ರೇಷ್ಠ ಯುವ ಆಟಗಾರ ಪ್ರಶಸ್ತಿ: ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಗೋಲು ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದ ಫ್ರಾನ್ಸ್‌ನ 19ರ ಹರೆಯದ ಕೈಲಿಯಾನ್ ಬಾಪೆ ಶ್ರೇಷ್ಠ ಯುವ ಆಟಗಾರರಿಗೆ ನೀಡುವ ರೇಮಂಡ್ ಕೊಪಾ ಟ್ರೋಫಿ ಪ್ರಶಸ್ತಿ ಸ್ವೀಕರಿಸಿದರು. ಪ್ಯಾರಿಸ್ ಸೈಂಟ್-ಜರ್ಮೈನ್ ಫಾರ್ವರ್ಡ್ ಆಟಗಾರ ಬಾಪೆ ರಶ್ಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಶ್ರೇಷ್ಠ ಯುವ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor